Skip to main content

Posts

ಪತ್ರಲೇಖನ

ಪತ್ರಲೇಖನ ಪೀಠಿಕೆ ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ. ಪತ್ರಲೇಖನ ಒಂದು ಕಲೆ . ಹಿಂದೊಮ್ಮೆ ಇದು ಬಹಳ ಪರಿಣಾಮಕಾರಿಯಾದ ಸಂಪರ್ಕ ಸಾಧನವಾಗಿತ್ತು. ಪುರಾಣ ,ಕಾವ್ಯಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂದೇಶ ಕಳಿಸುವಾಗ ಪಾರಿವಾಳಗಳ ಮೂಲಕ ಕಳಿಸುವ ಪರಿಪಾಠವಿತ್ತು. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಸಂದೇಶವನ್ನು ಕಳಿಸಲು ಮೇಘಗಳನ್ನು ಬಳಸಿದ್ದನ್ನು ನೋಡಬಹುದು. ಕಾಲಾನಂತರದಲ್ಲಿ ಸಂದೇಶಗಳನ್ನು ಕಳಿಸಲು ದೂತರು ಕುದುರೆಯ ಮೇಲೆ ಸಾಗುತ್ತಿದ್ದರು. ಎಲೆಗಳ ಮೇಲೆ ಬರೆಯುತ್ತಿದ್ದ ಸಂದೇಶಗಳು ಕ್ರಮೇಣ ಕಾಗದಗಳ ಮೇಲೆ ಬರೆಯಲ್ಪಟ್ಟು ಅಂಚೆ ಇಲಾಖೆಗಳ ಮೂಲಕ ಪತ್ರದ ರೂಪ ತಾಳಿ ಪತ್ರವ್ಯವಹಾರ ಪ್ರಾರಂಭವಾಯಿತು. ಇಂದು ದೂರವಾಣಿ ,ಮೊಬೈಲ್ ,ಗಣಕಯಂತ್ರ ಗಳು ಬಂದ ಮೇಲೆ ಪತ್ರವ್ಯವಹಾರವು ತನ್ನ ಮೊದಲಿನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಇಂದು ಅಂತರ್ಜಾಲ ಸೌಲಭ್ಯದಿಂದಾಗಿ ಹೆಚ್ಚಿನ ಸಂದೇಶಗಳು ಮಿಂಚಂಚೆಯ (mail) ಮೂಲಕ ರವಾನೆಯಾಗುತ್ತಿವೆ. ಮೊಬೈಲ್‌ನಲ್ಲಿ ಎಷ್ಟೋ ದೂರದಲ್ಲಿರುವವರಿಗೆ whatsapp ,hike ,telegram ಇವೇ ಮೊದಲಾದ ವ್ಯವಸ್ಥೆಗಳ ಮೂಲಕ ಕ್ಷಣ ಮಾತ್ರದಲ್ಲಿ ಸಂದೇಶವನ್ನು ರವಾನಿಸಬಹುದಾಗಿದೆ. ಹಾಗಾಗಿ ಇಂದು ಪತ್ರ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ...

ಕನ್ನಡ: ಅಲಂಕಾರ ಶಾಸ್ತ್ರ

ಕನ್ನಡ: ಅಲಂಕಾರ ಶಾಸ್ತ್ರ Contents  [hide]  ೧ಅಲಂಕಾರಗಳು ೨ನವರಸಗಳು ೨.೧ಒಂಭತ್ತು ನವರಸಗಳು/ಸ್ಥಾಯಿಭಾವಗಳು ೩1.ಶಬ್ದಾಲಂಕಾರಗಳು : ೩.೧1.ಅನುಪ್ರಾಸ: ೩.೨2.ಯಮಕಾಲಂಕಾರ: ೩.೩3. ಚಿತ್ರಕವಿತ್ವ : ೪2 ಅರ್ಥಾಲಂಕಾರಗಳು: ೪.೧1. ಉಪಮಾ ಅಲಂಕಾರ : ೪.೨2. ರೂಪಕ ಅಲಂಕಾರ: ೪.೩3. ದೃಷ್ಠಾಂತ ಅಲಂಕಾರ: ೪.೪4.ಶ್ಲೇಷಾಲಂಕಾರ: ೪.೫5. ದೀಪಕ ಅಲಂಕಾರ: ೪.೬6.ಉತ್ಪ್ರೇಕ್ಷಾಲಂಕಾರ: ಅಲಂಕಾರಗಳು ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡಿಗೆಗಳನ್ನು ಧರಿಸುವಂತೆ, ಕಾವ್ಯವು ಆಕರ್ಷಕವಾಗುವಂತೆ ಅರ್ಥವೈಚಿತ್ರ್ಯದಿಂದ ಕೂಡಿದ, ಶಬ್ದವೈಚಿತ್ರ್ಯದಿಂದ ಕೂಡಿದ ಮಾತುಗಳನ್ನು ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಇಂಥ ಮಾತುಗಳೇ ಅಲಂಕಾರಗಳು. ಅರ್ಥವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಅದು ಅರ್ಥಾಲಂಕಾರ. ಶಬ್ದ ವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ. ಕನ್ನಡದಲ್ಲಿ ಅಲಂಕಾರ ಗ್ರಂಥ ಬರೆದ ಲಾಕ್ಷಣಿಕರು ಮುಖ್ಯವಾಗಿ ನೃಪತುಂಗ, ನಾಗವರ್ಮ, ತಿರುಮಲಾರ‍್ಯ, ಜಾಯಪ್ಪದೇಸಾಯಿ ಮುಂತಾದವರು. ಇವರು ಕ್ರಮವಾಗಿ ಕವಿರಾಜಮಾರ್ಗ, ಕಾವ್ಯಾವಲೋಕನ, ಅಪ್ರತಿಮವೀರಚರಿತೆ, ಕನ್ನಡಕುವಲಯಾನಂದ-ಇತ್ಯಾದಿ ಗ್ರಂಥ ಬರೆದಿದ್ದಾರೆ. ಅಲಂಕಾರದ ಬಗೆಗಿನ ವಿವರವಾದ ಮಾಹಿತಿಯನ್ನಜು ಕಣಜ ಅಂತರ್ಜಾಲ ಪುಟದಲ್ಲಿ ನೋಡಬಹುದು. ನವರಸಗಳು ಭಾರತೀಯ ಕಲಾ ಪ್ರಕಾರಗಳಲ್ಲಿ ಕಂಡು ಬರುವ ಒಂಭತ್ತು ರೀತಿಯ ಭಾವನೆಯ ಅಭಿವ್ಯಕ್ತಿಗಳನ್ನು ಒ...

ಕನ್ನಡ: ಛಂದಸ್ಸು ಶಾಸ್ತ್

ಕನ್ನಡ: ಛಂದಸ್ಸು ಶಾಸ್ತ್ರ ಛಂದಸ್ಸು ಛಂದಸ್ಸು  - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು. ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ. ಛಂದಸ್ಸಿನಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ ವಿಭಾಗಗಳು ಪ್ರಾಸಯತಿಗಣ ಪ್ರಾಸ ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ . ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ  ಆದಿ ಪ್ರಾಸ . ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು  ಮಧ್ಯ ಪ್ರಾಸ . ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ. ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯ ಪ್ರಾಸ . ಯತಿ ಯತಿ  ಎಂದರೆ ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ. ಗಣ ಗಣ  ಎಂದರೆ ಗುಂಪು. ಛಂದಸ್ಸಿನಲ್ಲಿ  ಮಾತ್ರಾಗಣ , ಅಕ್ಷರಗಣ  ಮತ್ತು  ಅಂಶಗಣ ಗಳೆಂಬ ಮೂರು ವಿಧದ ಗಣಗಳಿವೆ. ಮಾತ್ರಾಗಣ ಮಾತ್ರೆಗಳ ಆಧಾರದಿಂದ  ಗಣ  ವಿಭಾಗ ಮಾಡುವುದೇ ಮಾತ್ರಾಗಣ . ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು  ಗಣ  ಮಾಡಲಾಗುವುದು....

ಕನ್ನಡ ವ್ಯಾಕರಣ

ಕನ್ನಡ ವ್ಯಾಕರಣ ಛಂದಸ್ಸು ಶಾಸ್ತ್ರ ಅಲಂಕಾರ ಶಾಸ್ತ್ರ ಸಾಹಿತ್ಯ ಪ್ರಕಾರಗಳು ಕವಿಗಳ ಮಾಹಿತಿ ಇತರೆ ವ್ಯಾಕರಣ ಸಂಬಂಧಿ ವೆಬ್ ತಾಣಗಳು & ಶಿಕ್ಷಕರ ಸಂಪನ್ಮೂಲ "ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಹೆಸರು" ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗ ಮಾಡಬೇಕಾದರೆ ಆ ಭಾಷೆಯ ವ್ಯಾಕರಣ ಪರಿಚಯ ಅತ್ಯಾವಶ್ಯಕ. ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು. ಭಾಷೆಯ ಅಧ್ಯಯನದ ಆರಂಭದಲ್ಲಿ ಪ್ರಯೋಗಗಳ ಮೂಲಕ ವ್ಯಾಕರಣದ ಅರಿವನ್ನುಂಟುಮಾಡಿದರೂ ಮುಂದೆ ಸಕ್ರಮವಾಗಿ ವ್ಯಾಕರಣ ಶಾಸ್ತ್ರದ ಪರಿಚವನ್ನು ಮಾಡಿಸುವ ಅವಶ್ಯಕತೆಯಿದೆ. ಈ ದೃಷ್ಟಿಯಿಂದ ನಮ್ಮ ಪ್ರೌಢ ಶಾಲೆಗಳ ಪಠ್ಯಕ್ರಮದಲ್ಲಿ ವ್ಯಾಕರಣ ಶಾಸ್ತ್ರದ ಮುಖ್ಯ ವಿಷಯಗಳನ್ನು ಅಳವಡಿಸಲಾಗಿದೆ. ಈ ನಿಟ್ಟಿನಲ್ಲಿ ಕನ್ನಡ ವ್ಯಾಕರಣವು ಹೊಂದಿರುವ ಹಲವು ಅಂಶಗಳನ್ನು ಇಲ್ಲಿ ಸವಿವರವಾಗಿ ನೋಡಬಹುದು. Contents  [hide]  ೧ಕನ್ನಡ ವರ್ಣಮಾಲೆ೧.೧ವರ್ಣಮಾಲೆಯ ವಿಧಗಳು೧.೧.೧ಸ್ವರಗಳು: 13೧.೧.೧.೧ ಸ್ವರಗಳ ವಿಧಗಳು೧.೧.೨ವ್ಯಂಜನಗಳು: 34೧.೧.೨.೧ ವ್ಯಂಜನಗಳ ವಿಧಗಳು:2೧.೧.೩ಯೋಗವಾಹಗಳು:2೧.೧.೩.೧ಯೋಗವಾಹಗಳ ವಿಧಗಳು೧.೧.೪ಸಂಯುಕ್ತಾಕ್ಷರಗಳು೧.೧.೪.೧ಸಂಯುಕ್ತಾಕ್ಷರಗಳ ವಿಧಗಳು೨ಸಂಧಿ ಪ್ರಕರಣ೨.೧ಸಂಧಿಗಳ ಪರಿಕಲ್ಪನಾ ನಕ್ಷೆ೨.೨ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು೨.೩ಸಂಧಿಗಳ ವಿಧಗಳು೨.೩.೧ಕನ್ನಡ ಸಂಧಿಗಳು೨.೩.೧.೧1.ಲೋಪ ಸಂಧಿ೨.೩....
*ವೃದ್ದಾಶ್ರಮದಲ್ಲಿ ತಂದೆ ತಾಯಿಯರನ್ನು ನೋಡಿ ಎಲ್ಲರೂ ಮಗನನ್ನೇ ಹಳಿಯುತ್ತಾರೆ* ಆದರೆ ಸಮಾಜ ಮರೆತು ಹೋಗುತ್ತೆ ಅವರನ್ನು ಆಶ್ರಮಕ್ಕೆ ಅಟ್ಟುವುದರಲ್ಲಿ ಒಬ್ಬ ಮಗಳ ಕೈವಾಡವಿದೆಯೆಂದು..!! ಇಲ್ಲಾಂದ್ರೆ ಮದುವೆಗೆ ಮುಂಚೆ ಯಾಕೆ ಪುತ್ರ ಪೋಷಕರನ್ನು ಆಶ್ರಮಕ್ಕೆ ಕಳಿಸುವುದಿಲ್ಲಾ..!! ಸಂಸ್ಕಾರ ಮಗಳಿಗೂ ಕಲಿಸಿ..!! *ಕಹಿಯಾದರೂ ಸತ್ಯ* NliteMedia

Today's puzzle:

Today's puzzle: Sometimes the name of a country is hiding in the consecutive letters within a sentence. For example, FRANCE is hiding in, "The runners who lived at the top of the cliff ran centuries ago"(clifF RAN CEenturies). Find the name of the country hiding in the consecutive letters within these sentences. 1. You all must pay it back, or each of you will be in trouble. 2. Was Doctor Dolittle's favorite animal a glib yak? 3. A true optimist will never let hope rush away. 4. How often can a daydream come true? 5. Is there a health spa in this hotel? 6. They are going in diametrically opposite directions. 7. Is the county fair a nice place to visit? 8. The foot with which I lead is my left one. 9. He owns a ranch in Arizona. 10. The foods we deny ourselves are usually tasty. Solve it if ur so well versed