Skip to main content

ಕನ್ನಡ: ಛಂದಸ್ಸು ಶಾಸ್ತ್



ಕನ್ನಡ: ಛಂದಸ್ಸು ಶಾಸ್ತ್ರ

ಛಂದಸ್ಸು

ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ.
ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.
ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ.


ಛಂದಸ್ಸಿನಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ

ವಿಭಾಗಗಳು

ಪ್ರಾಸಯತಿಗಣ

ಪ್ರಾಸ

ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇಪ್ರಾಸ.
ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ ಆದಿ ಪ್ರಾಸ.
ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು ಮಧ್ಯ ಪ್ರಾಸ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ.

ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇಅಂತ್ಯ ಪ್ರಾಸ.

ಯತಿ

ಯತಿ ಎಂದರೆ ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.


ಗಣ

ಗಣ ಎಂದರೆ ಗುಂಪು. ಛಂದಸ್ಸಿನಲ್ಲಿ ಮಾತ್ರಾಗಣ,ಅಕ್ಷರಗಣ ಮತ್ತು ಅಂಶಗಣಗಳೆಂಬ ಮೂರು ವಿಧದ ಗಣಗಳಿವೆ.

ಮಾತ್ರಾಗಣ

ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.

ಮಾತ್ರೆ

ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನುಮಾತ್ರೆ ಎಂಬ ಮಾನದಿಂದ ಅಳೆಯಲಾಗುವುದು.

ಲಘು

ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ( U) ಎನ್ನುವರು.

ಗುರು

ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( - ) ಎಂದು ಕರೆಯುವರು.

ಪ್ರಸ್ತಾರ

ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವುದು ಎನ್ನುವರು.


ಅಕ್ಷರವು ಗುರು ಎನಿಸುವ ಲಕ್ಷಣಗಳು

ಲಕ್ಷಣಉದಾಹರಣೆದೀರ್ಘಾಕ್ಷರ_ U 
ಶಾಲೆಒತ್ತಕ್ಷರದ ಹಿಂದಿನ ಅಕ್ಷರ_ U U U 
ಒ ತ್ತಿ ನ ಣೆಅನುಸ್ವಾರದಿಂದ ಕೂಡಿರುವ ಅಕ್ಷರ_   U  U 
ಬಂ ದ ನುವಿಸರ್ಗದಿಂದ ಕೂಡಿರುವ ಅಕ್ಷರ_  U 
ದುಃಖವ್ಯಂಜನಾಕ್ಷರದಿಂದ ಕೂಡಿದ ಅಕ್ಷರU U   _
ಮನದೊಳ್ ಸ್ವರವಿರುವ ಅಕ್ಷರ_   U   U 
ಕೈ ಮು ಗಿ ಸ್ವರವಿರುವ ಅಕ್ಷರ_    U 
ಮೌ ನಷಟ್ಪದಿಯ ಮೂರು ಮತ್ತು ಆರನೆಯ ಪಾದದ ಕೊನೆಯ ಅಕ್ಷರ 

ಅಕ್ಷರವು ಲಘು ಎನಿಸುವ ಲಕ್ಷಣಗಳು

ಗುರು ಎನಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರದ ಅಕ್ಷರಗಳನ್ನು ಲಘು ಎಂದು ಪರಿಗಣಿಸಬೇಕು.

ಮಾತ್ರಾಗಣ ಆಧಾರಿತ ಛಂದಸ್ಸುಗಳು

ಕಂದ ಪದ್ಯಷಟ್ಪದಿರಗಳೆಕಾವ್ಯ

ಅಕ್ಷರಗಣ

ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇಅಕ್ಷರಗಣ.

ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳೂ ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮವಿಲ್ಲ. ಗಣ ವಿಂಗಡಣೆಯ ನಂತರ ಒಂದು ಅಥವಾ ಎರಡು ಅಕ್ಷರಗಳು ಶೇಷವಾಗಿ ಉಳಿಯಬಹುದು.

ಅಕ್ಷರಗಣಗಳ್ಲಿ ಒಟ್ಟು ಎಂಟು ವಿಧಗಳಿವೆ.

ಯಗಣಮಗಣತಗಣರಗಣಜಗಣಭಗಣನಗಣಸಗಣ

ಯಮಾತಾರಾಜಭಾನ ಸಲಗಂ ಸೂತ್ರ

ಅಕ್ಷರಗಣಗಳನ್ನು ಯಮಾತಾರಾಜಭಾನ ಸಲಗಂಎಂಬ ಸೂತ್ರದ ಆಧಾರದಿಂದ ನಿರ್ಣಯಿಸಬಹುದಾಗಿದೆ.

ಗಣಅಕ್ಷರಗಳುಪ್ರಸ್ತಾರಗಣಯಮಾತಾU   _   _ಗಣಮಾತಾರಾ_   _   _ಗಣತಾರಾಜ_   _   Uಗಣರಾಜಭಾ_   U   _ಗಣಜಭಾನU   _   Uಗಣಭಾನಸ_   U   UಗಣನಸಲU   U   UಗಣಸಲಗಂU   U   _

ಗಣಗಳನ್ನು ಗುರುತಿಸುವ ಪದ್ಯ

ಅಕ್ಷರಗಣದಲ್ಲಿ ಬರುವ ಎಂಟು ಗಣಗಳನ್ನು ಗುರುತಿಸಲು ಕೆಳಗಿನ ಪದ್ಯವು ಸಹಕಾರಿಯಾಗಿದೆ.

ಗುರು ಲಘು ಮೂರಿರೆ  -  - ಗಣ
ಗುರು ಲಘು ಮೊದಲಲ್ಲಿ ಬರಲು  -  - ಗಣಮೆಂಬರ್
ಗುರು ಲಘು ನಡುವಿರೆ  -  - ಗಣ
ಗುರು ಲಘು ಕೊನೆಯಲ್ಲಿ ಬರಲು  -  - ಗಣಮಕ್ಕುಂ


ವೃತ್ತಗಳು

ಅಕ್ಷರಗಣದ ಛಂದಸ್ಸನ್ನು ವೃತ್ತ ಎಂದು ಕರೆಯಲಾಗುತ್ತದೆ.ಇದರಲ್ಲಿ ಪ್ರತಿ ಪದ್ಯವೂ ನಾಲ್ಕು ಸಾಲುಗಳಿರುತ್ತವೆ. ಆದಿಪ್ರಾಸ ಕಡ್ಢಾಯವಾಗಿ ಬರುತ್ತದೆ.
ಕನ್ನಡದಲ್ಲಿ ಪ್ರಸಿದ್ಧವಾಗಿ ಆರು ವೃತ್ತಗಳು ಬಳಕೆಯಲ್ಲಿವೆ. ಅವನ್ನು ಖ್ಯಾತಕರ್ಣಾಟಕ ವೃತ್ತಗಳೆಂದು ಕರೆಯುತ್ತಾರೆ. ಅವು 

ಉತ್ಪಲ ಮಾಲಾ ವೃತ್ತ
ಚಂಪಕಮಾಲಾವೃತ್ತ
ಶಾರ್ದೂಲವಿಕ್ರೀಡಿತ ವೃತ್ತ
ಮತ್ತೇಭವಿಕ್ರೀಡಿತ ವೃತ್ತ
ಸ್ರಗ್ಧರಾ ವೃತ್ತ
ಮಹಾಸ್ರಗ್ಧರಾ ವೃತ್ತ

ಅಂಶಗಣ

ಅಂಶಗಳ ಆಧಾರದಿಂದ ಗಣ ವಿಭಾಗ ಮಾಡುವುದೇಅಂಶಗಣ.ಇದನ್ನು ನಾಗವರ್ಮನು "ಕರ್ಣಾಟಕ ವಿಷಯಜಾತಿ" ಎಂದೂ ಹಾಗೇ ಜಯಕೀರ್ತಿಯು "ಕರ್ಣಾಟಕವಿಷಯಭಾಷಾಜಾತಿ" ಎಂದೂ ಕರೆದಿದ್ದಾರೆ.
ಇದು ಅಪ್ಪಟ ದೇಸೀ ಛಂದಸ್ಸಿನ ಪ್ರಕಾರವಾಗಿದೆ.
ಒಂದು ಅಂಶ ಎಂದರೆ ಒಂದು ಮಾತ್ರಾ ಕಾಲವೂ ಆಗಬಹುದು, ಅಥವಾ ಎರಡು ಮಾತ್ರಾಕಾಲವೂ ಆಗಬಹುದು. ಗಣದ ಆರಂಭದಲ್ಲಿ ಮಾತ್ರ ಎರಡು ಮಾತ್ರೆಗಳಿಗೆ ಒಂದು ಅಂಶವನ್ನು ಪರಿಗಣಿಸಬೇಕು.
ಉದಾ:- "ಕವಿತೆ" ಈ ಶಬ್ದದಲ್ಲಿ ಎರಡು ಅಂಶಗಳಾಗುತ್ತವೆ. 'ಕವಿ' ಎಂಬುದು ಒಂದು ಅಂಶವಾದರೆ 'ತೆ' ಎಂಬುದು ಇನ್ನೊಂದು ಅಂಶವಾಗುತ್ತದೆ,
ಇದರಲ್ಲಿ ಮೂರು ವಿಧ. ಅವನ್ನುಬ್ರಹ್ಮಗಣ,ವಿಷ್ಣುಗಣ,ರುದ್ರಗಣ ಎಂದು ಕರೆಯುವರು.
(ವಿ.ಸೂ- ಗು-ಗುರು, ಲ-ಲಘು,ಅಲ್ಪವಿರಾಮ(,)ದಿಂದ ಅಂಶಗಳನ್ನು ಬೇರ್ಪಡಿಸಿದೆ.) ಬ್ರಹ್ಮಗಣದಲ್ಲಿ ಎರಡು ಅಂಶಗಳಿರುತ್ತವೆ. ಅವು ಈ ನಾಲ್ಕು ರೀತಿಯಲ್ಲಿಯೂ ಇರಬಹುದು
೧. ಗು,ಗು 
೨. ಗು,ಲ
೩,ಲಲ,ಗು 
೪.ಲಲ,ಲ
ಹಾಗೆಯೇ ವಿಷ್ಣುಗಣದಲ್ಲಿ ಮೂರು ಅಂಶಗಳು ಇರುತ್ತವೆ. ಅವುಗಳ ವಿಧಗಳು ಹೀಗಿವೆ-
೧.ಗು,ಲ,ಲ
೨.ಗು,ಗು,ಲ
೩.ಗು,ಗು,ಗು
೪.ಗು,ಲ,ಗು
೫.ಲಲ,ಗು,ಗು
೬.ಲಲ,ಗು,ಲ
೭.ಲಲ,ಲ,ಗು
೮.ಲಲ,ಲ,ಲ
ಹಾಗೆಯೇ ರುದ್ರಗಣದಲ್ಲಿ ನಾಲ್ಕು ಅಂಶಗಳಿರುತ್ತವೆ, ಅವುಗಳ ವಿಧಗಳನ್ನೂ ಹೀಗೆ ತೋರಿಸಬಹುದು
೧.ಗು,ಲ,ಲ,ಲ
೨.ಗು,ಗು,ಲ,ಲ
೩.ಗು,ಗು,ಗು,ಲ
೪.ಗು,ಗು,ಗು,ಗು
೬,ಗು,ಲ,ಗು,ಲ
೭,ಗು,ಲ,ಲ,ಗು
೮. ಗು,ಗು,ಲ,ಗು
೯.ಗು,ಲ,ಗು,ಗು,ಇತ್ಯಾದಿ, ಹಾಗೆಯೇ ಮೊದಲ ಗುರುವಿನ ಬದಲು ಎರಡು ಲಘುಗಳನ್ನು ಇಟ್ಟುಕೊಂಡು ಕೂಡ ಗಣಗಳನ್ನು ರಚಿಸಬಹುದು. ಸಾಂಗತ್ಯ, ತ್ರಿಪದಿ, ಅಕ್ಕರ, ಸೀಸಪದ್ಯ ,ಅಕ್ಕರಿಕೆ, ಏಳೆ, ಗೀತಿಕೆ, ಅಂಶಷಟ್ಪದಿ, ಚೌಪದಿ, ಛಂದೋವತಂಸ, ಮದನವತಿ, ಪಿರಿಯಕ್ಕರ,ಇತ್ಯಾದಿಗಳು ಅಂಶಚ್ಛಂದಸ್ಸಿನ ಹಲವು ಪ್ರಕಾರಗಳು.
ಪದ್ಯಪಾನ ಜಾಲತಾಣದಲ್ಲಿ ಅಂಶಚ್ಛಂದಸ್ಸಿನ ಬಗ್ಗೆ ಇನ್ನಷ್ಟು ಮಾಹಿತಿ ಸಿಗುತ್ತದೆ.

=ಕನ್ನಡ ಛಂಧೋಗ್ರಂಥಗಳ ಪರಿಚಯ

ಕವಿರಾಜ ಮಾರ್ಗ:

ನೃಪತುಂಗನ ಆಸ್ಥಾನದಲ್ಲಿದ್ದ "ಶ್ರೀವಿಜಯ'ನಿಂದ ರಚಿಸಲ್ಪಟ್ಟಿತು.ಇದರ ಕಾಲ ಕ್ರಿ.ಶ. 850 ಇದು ಅಲಂಕಾರಿಕ ಗ್ರಂಥವಾದರೂ ವ್ಯಾಕರಣ ಮತ್ತು ಛಂದಸ್ಸುಗಳ ಕೆಲ ಅಂಶಗಳನ್ನು ಪ್ರಸ್ತಾಪಿಸಿದೆ.ಇಲ್ಲಿ ಯತಿ ವಿಚಾರ, ಛಂದೋಭಂಗ, ಗುರು ಲಘು ದೋಷಗಳು ಪ್ರಾಸ ವಿಚಾರ ಮೊದಲಾದವನ್ನು ತಿಳಿಸುತ್ತದೆ.

ಗುಣಗಾಂಕಿಯಂ :

ಜೈನ ಲಾಕ್ಷಣಿಕನಾದ "ಅಮೃತ ಸಾಗರ"ಎಂಬುವನಿಂದ ರಚಿತವಾದ "ಯಾಪ್ಪರುಂಗ ಲಕ್ಕಾರಿಹೈ" ಎಂಬ ಛಂದೋಗ್ರಂಥವೊಂದು ತಮಿಳು ಭಾಷೆಯಲ್ಲಿದೆ.ಇದು 11ನೇ ಶತಮಾನಕ್ಕಿಂತ ಹಿಂದೆ ರಚಿತವಾಗಿರಬಹುದೆಂದು ತಿಳಿಯಲಾಗಿದೆ. ಇದಕ್ಕೆ ಚೈನವ್ಯಾಖ್ಯಾತೃವ಻ದ "ಗುಣಸಾಗರನೆಂಬುವನು" ಒಂದು ವ್ಯಾಖ್ಯಾನವನ್ನು ಬರೆದಿದ್ದಾನೆ.

Comments

Popular posts from this blog

ಪತ್ರಲೇಖನ

ಪತ್ರಲೇಖನ ಪೀಠಿಕೆ ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ. ಪತ್ರಲೇಖನ ಒಂದು ಕಲೆ . ಹಿಂದೊಮ್ಮೆ ಇದು ಬಹಳ ಪರಿಣಾಮಕಾರಿಯಾದ ಸಂಪರ್ಕ ಸಾಧನವಾಗಿತ್ತು. ಪುರಾಣ ,ಕಾವ್ಯಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂದೇಶ ಕಳಿಸುವಾಗ ಪಾರಿವಾಳಗಳ ಮೂಲಕ ಕಳಿಸುವ ಪರಿಪಾಠವಿತ್ತು. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಸಂದೇಶವನ್ನು ಕಳಿಸಲು ಮೇಘಗಳನ್ನು ಬಳಸಿದ್ದನ್ನು ನೋಡಬಹುದು. ಕಾಲಾನಂತರದಲ್ಲಿ ಸಂದೇಶಗಳನ್ನು ಕಳಿಸಲು ದೂತರು ಕುದುರೆಯ ಮೇಲೆ ಸಾಗುತ್ತಿದ್ದರು. ಎಲೆಗಳ ಮೇಲೆ ಬರೆಯುತ್ತಿದ್ದ ಸಂದೇಶಗಳು ಕ್ರಮೇಣ ಕಾಗದಗಳ ಮೇಲೆ ಬರೆಯಲ್ಪಟ್ಟು ಅಂಚೆ ಇಲಾಖೆಗಳ ಮೂಲಕ ಪತ್ರದ ರೂಪ ತಾಳಿ ಪತ್ರವ್ಯವಹಾರ ಪ್ರಾರಂಭವಾಯಿತು. ಇಂದು ದೂರವಾಣಿ ,ಮೊಬೈಲ್ ,ಗಣಕಯಂತ್ರ ಗಳು ಬಂದ ಮೇಲೆ ಪತ್ರವ್ಯವಹಾರವು ತನ್ನ ಮೊದಲಿನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಇಂದು ಅಂತರ್ಜಾಲ ಸೌಲಭ್ಯದಿಂದಾಗಿ ಹೆಚ್ಚಿನ ಸಂದೇಶಗಳು ಮಿಂಚಂಚೆಯ (mail) ಮೂಲಕ ರವಾನೆಯಾಗುತ್ತಿವೆ. ಮೊಬೈಲ್‌ನಲ್ಲಿ ಎಷ್ಟೋ ದೂರದಲ್ಲಿರುವವರಿಗೆ whatsapp ,hike ,telegram ಇವೇ ಮೊದಲಾದ ವ್ಯವಸ್ಥೆಗಳ ಮೂಲಕ ಕ್ಷಣ ಮಾತ್ರದಲ್ಲಿ ಸಂದೇಶವನ್ನು ರವಾನಿಸಬಹುದಾಗಿದೆ. ಹಾಗಾಗಿ ಇಂದು ಪತ್ರ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ...

ಕನ್ನಡ ವ್ಯಾಕರಣ

ಕನ್ನಡ ವ್ಯಾಕರಣ ಕನ್ನಡ ಪಠ್ಯ ಕ್ರಮ 1. ವ್ಯಾಕರಣ 2. ಛಂದಸ್ಸು 3 ಅಲಂಕಾರ 4. ಸಾಹಿತ್ಯ ಚರಿತ್ರೆ I. ವ್ಯಾಕರಣ ಭಾಷೆಯ ಸ್ವರೂಪ ಜ್ನಾನ ಅರ್ಥಗಳಲ್ಲದೆ ಉಚ್ಛಾರ ಶೃತಿಗಳನ್ನು ವ್ಯವಸ್ಥಿತವಾಗಿ ನಿಯಮಗಳ ಮೂಲಕ ತಿಳೀಸುವುದೇ ವ್ಯಾಕರಣ ಶಾಸ್ತ ವ್ಯಾಕರಣದ ಬಗ್ಗೆ ತಿಳಿಸುವುವರು ವೈಯಾಕರಣಿಗಳು II ಛಂದಸ್ಸು ಕಾವ್ಯರಚನೆ ಸೌಂಧರ್ಯ ಸೊಭಗತೆಯನ್ನು ಸೂತ್ರ ರೊಪದಲ್ಲಿ ಪರಿಚಯಿಸುದೇ ಛಂದಸ್ಸು ಶಾಸ್ತ್ರ II. ಅಲಂಕಾರಗಳು ಕಾವ್ಯದೇವಿಯನ್ನು ಶಬ್ಧ ಅರ್ಥಗಳ ಉಡುಗೆತೊಡಿಗೆಗಳಿಂದ ಶೋಭಿಸುವಂತೆ ಅಲಂಕರಿಸುವುದೇ ಅಲಂಕಾರ ಶಾಸ್ತ್ರ ಮೇಲಿನ ಮೂರು ಪ್ರಕರಣ ಅಂದರೆ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರಗಳನ್ನೊಳಗೊಂಡ ಗ್ರಂಥಕ್ಕೆ ಲಕ್ಷಣ ಗ್ರಂಥ ಎನ್ನುವರು. ಮೊಟ್ಟ ಮೊದಲಿಗೆ ಹಳಗನ್ನಡದಲ್ಲಿ ವ್ಯಾಕರಣದ ಬಗ್ಗೆ ಹೇಳಿದವನು 1. 2ನೇ ನಾಗವರ್ಮ ಅಥವಾ ಇಮ್ಮಡಿ ನಾಗವರ್ಮ ಕಾಲ: 11ನೇ ಶತಮಾನ ಕೃತಿಗಳು 1. ಕರ್ನಾಟಕ ಭಾಷಾ ಭೂಷಣ 2. ಕಾವ್ಯಾವಲೋಕನ 3. ವರ್ಧಮಾನ ಪುರಾಣ 4. ಅಭಿದಾನ ವಸ್ತು ಕೋಶ 5. ಛಂದೋ ವಿಚಿತಿ 2. ಕನ್ನಡ ಶ್ರೇಷ್ಠ ವೈಯಾಕರಣಿ ಮತ್ತು ಶ್ರೇಷ್ಠ ಗ್ರಂಥ ಕೇಶಿ ರಾಜ ಕಾಲ: 13 ನೇ ಶತಮಾನ (1260) ಶ್ರೇಷ್ಠ ಕೃತಿ: ಶಬ್ಧಮಣಿದರ್ಪಣ ಇದರಲ್ಲಿ 8 ಭಾಗಗಳಿವೆ 3. ಭಟ್ಟಾಕಳಂಕಾ ಕಾಲ: 16 ಮತ್ತು 17 ನೆ ಶತಮಾನ ಕೃತಿ : ಶಬ್ಢ ಅನುಶಾಸನ. ಇದು ಸಂಸ್ಕೃತದಲ್ಲಿದೆ ಪ್ರಸ್ತುತ ಕನ್ನಡ ವರ್ಣಮಾಲೆ 49 ಸ್ವರಗಳು ಕನ್ನಡದಲ್ಲಿ ಒಟ್ಟು...
Do try this - it's pretty accurate I think.....😅😅 In the middle of the table was a round food tray with 5 kinds of fruit in it. There are: a. Apple b. Banana c. Mango d. Grapes e. Orange Which fruit will u choose? Your choice reveals about u! Pls be very Honest to yourself….. & Now scroll down for results: . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . Here are the results. A. if you chosen Apple : that means you are a person who loves to eat Apple B. if you chosen banana : that means you are a person who loves to eat Banana C. if you chosen mango : that means you are a person who loves to eat mango D. if you chosen grapes : that means you are a person who loves to eat grapes E. if you chosen orange : that means you are person who loves to eat Orange Note: If you are hunting for me to punch …..Well…I am busy hunting for th...