Skip to main content
ಬದುಕು ಹೆಚ್ಚೋ, ಅನಿವಾರ್ಯತೆಗಳು ಹೆಚ್ಚೋ ಎಂಬುದನ್ನುಮೊದಲು ನಿರ್ಧರಿಸಿಕೊಳ್ಳಬೇಕು. ಅನಿವಾರ್ಯತೆಗಳ ಹಿಂದೇಓಡುತ್ತಿದ್ದರೆ ಬದುಕು ಮುಗಿದದ್ದೇ ಗೊತ್ತಾಗುವುದಿಲ್ಲ.ಭಗವಂತ ಎಲ್ಲರಿಗೂ ಸೆಕೆಂಡ್ ಇನಿಂಗ್ಸ್‌ನ ಚಾನ್ಸುಕೊಡುವುದಿಲ್ಲ. ಹಾಗಾಗಿ, ಯಶಸ್ಸಿನ ಭವ್ಯಸೌಧ ಕಟ್ಟುವಧಾವಂತದ ಬದಲು ಸಂತೃಪ್ತಿಯ ಪುಟ್ಟ ಗೂಡನ್ನು ಕಟ್ಟೋಣ.

ಈ ದೊಡ್ಡ ಜನ ಯಾವಾಗ ಹೆಂಗೆಂಗೆ ಆಡ್ತಾರೆ ಅಂತ ಆಮೇಲಿರೋ (ಒಳಗಿರೋದಲ್ಲ!) ಪರಮಾತ್ಮನಿಗೂಗೊತ್ತಾಗೋದಿಲ್ಲ ಅಂತೀನಿ. ಯಾಕೆ, ಏನಾಯ್ತು ಅಂತೀರಾ? ‘ಇನೋಸಿಸ್ ತೆರೆದು ನಾನು ದೊಡ್ಡ ತಪ್ಪು ಮಾಡ್ದೆ’ ಎಂದುನಮ್ಮ ನಾರಾಯಣ ಮೂರ್ತಿ, ‘-ಸ್‌ಬುಕ್ ತೆರೆದು ತಪ್ಪುಮಾಡ್ದೆ’ ಅಂತ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದನ್ನ ಎಂದಾದರೂಕೇಳಿದ್ದೀರಾ? ‘ಬಿಡ್ತು ಅನ್ನಿ, ಅವರ‍್ಯಾಕೆ ಹಂಗೆ ಆಡ್ಯಾರು’ಅಂತ ನೀವು ಹುಬ್ಬೇರಿಸುತ್ತೀರಿ ಅನ್ನೋದು ಗೊತ್ತು. ಅವನೊಬ್ಬನೌಕರಿ ಕೊಡಿ ಎಂದು ಕೆಎ-ಸಿ ಮುಂದೆ ನಿಂತ. ಇವನ ಹಾಗೆಇನ್ನೂ 23 ಜನ ಕೆಲಸಕ್ಕಾಗಿ ಕ್ಯೂ ನಿಂತಿದ್ರು. ಅವರೆಲ್ಲ ಸೆಲೆಕ್ಟ್ಆದ್ರು. ಈತ ಆಯ್ಕೆಯಾಗದೆ ವಾಪಸ್ ಬಂದ. ಪೊಲೀಸ್ಆಗೋಣ ಅಂತ ಹೋದರೆ ಅಧಿಕಾರಿಗಳು ‘ನಿನ್ನ ಮುಖನೋಡ್ಕೊಂಡು ಬಾ’ ಅಂತ ಜನ್ಮ ಜಾಲಾಡಿಸಿಬಿಟ್ಟರು. ಹೀಗೇಮೂವತ್ತು ಕಡೆ ಕೆಲಸಕ್ಕೆ ಅಲೆದಲೆದು ‘ಈ ಪ್ರಪಂಚ ಮಹಾಕ್ರೂರಿ. ಕೆಲಸ ಕೊಡುವವರು ಅದಕ್ಕಿಂತಲೂ ಕ್ರೂರಿ’ಅಂದುಕೊಂಡು ಸ್ವಂತ ಬಲದಲ್ಲಿ ಏನಾದರೂ ಮಾಡೋಣ ಅಂತಹೊರಟವನು ಇಂದು ಚೀನಾದ ಅತ್ಯಂತ ಸಿರಿವಂತ ವ್ಯಕ್ತಿ! ‘ಹೋಇವ್ರಾ ಗೊತ್ತು ಬಿಡಿ’ ಎಂದು ಮುಖ ಸಪ್ಪೆ ಮಾಡ್ಬೇಡಿ. ನಾನುಖಂಡಿತವಾಗಿಯೂ ಅಲಿಬಾಬಾ ಎಂಬ ದೈತ್ಯ ಸಂಸ್ಥೆ ಕಟ್ಟಿದ ಜ್ಯಾಕ್ಮಾನ ಯಶಸ್ಸಿನ ಕಥನ ಹೇಳಲು ಹೊರಟಿಲ್ಲ. ಅಲಿಬಾಬಾಸಮೂಹವನ್ನು ವಿಶ್ವದ 5ನೇ ಸಿರಿವಂತ ರಾಷ್ಟ್ರಕ್ಕೆ ಸಮನಾಗಿಮಾಡಲು ಹೊರಟಿರುವ ಜ್ಯಾಕ್ ಮೊನ್ನೆ ಆಡಿದ ಮಾತುಗಳುಅಚ್ಚರಿಗೂ, ಜಿeಸೆಗೂ ಕಾರಣವಾಯ್ತು.

1.6 ಲಕ್ಷ ಕೋಟಿ ರೂಪಾಯಿ ನಿವ್ವಳ ಮೌಲ್ಯದ, 12.8 ಲಕ್ಷಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿರುವ ಅಲಿಬಾಬಾಸಮೂಹದ ಮಾಲೀಕ ಜ್ಯಾಕ್ ಹೇಳಿದ್ದೇನು ಗೊತ್ತಾ? ಸ್ವಲ್ಪ ಕಿವಿಅಗಲವಾಗಿಸಿಕೊಳ್ಳಿ. ‘ಅಲಿಬಾಬಾ ಕಂಪನಿ ಸ್ಥಾಪಿಸಿದ್ದು ನಾನುಜೀವನದಲ್ಲಿ ಮಾಡಿದ ದೊಡ್ಡ ತಪ್ಪು!’ ಎಲ್ಲೋ ತಮಾಷೆಯಾಗಿಹೇಳಿರಬಹುದು. ಅದನ್ಯಾಕೆ ಅಷ್ಟು ಸೀರಿಯಸ್ ಆಗಿ ತಗೋತಿರಿಅನ್ನುವವರು ಜ್ಯಾಕ್‌ನ ಮುಂದಿನ ಮಾತುಗಳನ್ನೂ ಸ್ವಲ್ಪಕೇಳಿಸಿಕೊಳ್ಳಿ. ‘ನಾನು ಸಣ್ಣಪುಟ್ಟ ಬಿಜಿನೆಸ್ಆರಂಭಿಸಬೇಕೆಂದಿದ್ದೆ’. ‘ಸಣ್ಣ ಜವಾಬ್ದಾರಿ ತೆಗೆದುಕೊಳ್ಳಬೇಕುಅಂದುಕೊಂಡಿದ್ದೆ’. ‘ಅಲಿಬಾಬಾ ಇಷ್ಟು ದೊಡ್ಡದಾಗಿಬೆಳೆದಿರುವುದು ನನಗೆ ತಲೆನೋವು ತಂದಿದೆ, ನೆಮ್ಮದಿಕಸಿದುಕೊಂಡಿದೆ’. ‘ದಿನನಿತ್ಯ ಸ್ಪರ್ಧೆಗೆ ಬೀಳುವ ನನಗೆ ಖಾಸಗಿಬದುಕೇ ಇಲ್ಲ’. ‘ನನಗೆ ಮತ್ತೊಮ್ಮೆ ಬದುಕುವ ಚಾನ್ಸ್ ಸಿಕ್ಕರೆಖಂಡಿತವಾಗಿಯೂ ಇಂಥ ಬಿಜಿನೆಸ್ ಮಾಡೋದಿಲ್ಲ’. ‘ನಾನುನನ್ನ ಬದುಕನ್ನು ಎಂಜಾಯ್ ಮಾಡಬೇಕು ಅಂದುಕೊಂಡಿದ್ದೇನೆ’ (ಅಬ್ಬಾ, ಎಂಥ ‘ಜ್ಞಾನೋದಯ’!) ‘ವಯಸ್ಸಾಗುವವರೆಗೂದುಡಿಯಲು ಬಯಸೋದಿಲ್ಲ. ರಿಟೈರ್‌ಮೆಂಟ್ ಬಗ್ಗೆ ಯೋಜನೆಹಾಕುತ್ತಿದ್ದೇನೆ’.

ಇದನ್ನು ತಡವಾಗಿ ಆದ eನೋದಯ ಅಂತಿರೋ ಇಲ್ಲ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ’ಅಂತಿರೋ ನಿಮಗೇ ಬಿಟ್ಟದ್ದು. ಬಿಲಿಯನೇರ್‌ಗಳ ಮಾತು ಸ್ವಲ್ಪಪಕ್ಕಕ್ಕಿಡಿ. ನಮ್ಮ-ನಿಮ್ಮಲ್ಲೂ ಅದೆಷ್ಟೋ ಜನ ಹೀಗೆಅನ್ಕೋತೀವಿ. ಬೆಂಗಳೂರಲ್ಲಿ ಸಾ-ವೇರ್ ರಂಗದಲ್ಲಿ ಇರೋ ನನ್ನಎಷ್ಟೋ ಸ್ನೇಹಿತರು 40ನೇ ವರ್ಷಕ್ಕೇ ರಿಟೈರ್ ಆಗಲು ಸಿದ್ಧತೆಮಾಡಿಕೊಳ್ಳುತ್ತಿದ್ದಾರೆ. ‘ಬರೀ ಒತ್ತಡ, ಟಾರ್ಗೆಟ್ ತಲುಪುವಧಾವಂತ-ಇಷ್ಟೇ ಬದುಕಾಗಿ ಹೋಗಿದೆ’ ಎನ್ನುವ ಇವರು, ಈರಂಗದ ಆಕರ್ಷಣೆಗೆ ಒಳಗಾಗಿ ಬಂದು ‘ಸಾ-ವೇರ್ಇಂಜಿನಿಯರ್’ಗಳಾದಾಗ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆವರ್ತಿಸಿದವರು. ಈಗ ಅವರಿಗೆಲ್ಲ ಆ ಕಾರ್ಪೋರೇಟ್ ಝಗಮಗಬೋರಾಗಿದೆ, ಸಾಕಾಗಿದೆ! ಅಷ್ಟೇ ಏಕೆ, ಈ ಬಾರಿಉಜ್ಜೈನಿಯಲ್ಲಿ ನಡೆದ ಕುಂಭಮೇಳದ ವೇಳೆ ಸಂನ್ಯಾಸಸ್ವೀಕರಿಸಿದವರ ಪೈಕಿ ಹಲವರು ಐಐಟಿಯಲ್ಲಿ ಓದಿದವರು,ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದವರು.

ಏಕೆ ಹೀಗಾಗುತ್ತೆ? ಬದುಕು ದಿಢೀರ್ ಅಂತ ಬದಲಾವಣೆ ಯಾಕೆಬಯಸುತ್ತೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯೇನಲ್ಲ.ಯಶಸ್ಸಿಗೂ ಸಂತೃಪ್ತಿಗೂ ಇರುವ ವ್ಯತ್ಯಾಸದ ಸಣ್ಣಗೆರೆಯನ್ನುಅರಿಯದಿದ್ದಾಗ ನಾವೆಲ್ಲ ಜ್ಯಾಕ್ ಮಾ ಆಗುತ್ತೇವೆ. ಹೌದು,ಯಶಸ್ಸು ಬೇರೆ, ಸಂತೃಪ್ತಿ

Comments

Popular posts from this blog

ಪತ್ರಲೇಖನ

ಪತ್ರಲೇಖನ ಪೀಠಿಕೆ ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ. ಪತ್ರಲೇಖನ ಒಂದು ಕಲೆ . ಹಿಂದೊಮ್ಮೆ ಇದು ಬಹಳ ಪರಿಣಾಮಕಾರಿಯಾದ ಸಂಪರ್ಕ ಸಾಧನವಾಗಿತ್ತು. ಪುರಾಣ ,ಕಾವ್ಯಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂದೇಶ ಕಳಿಸುವಾಗ ಪಾರಿವಾಳಗಳ ಮೂಲಕ ಕಳಿಸುವ ಪರಿಪಾಠವಿತ್ತು. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಸಂದೇಶವನ್ನು ಕಳಿಸಲು ಮೇಘಗಳನ್ನು ಬಳಸಿದ್ದನ್ನು ನೋಡಬಹುದು. ಕಾಲಾನಂತರದಲ್ಲಿ ಸಂದೇಶಗಳನ್ನು ಕಳಿಸಲು ದೂತರು ಕುದುರೆಯ ಮೇಲೆ ಸಾಗುತ್ತಿದ್ದರು. ಎಲೆಗಳ ಮೇಲೆ ಬರೆಯುತ್ತಿದ್ದ ಸಂದೇಶಗಳು ಕ್ರಮೇಣ ಕಾಗದಗಳ ಮೇಲೆ ಬರೆಯಲ್ಪಟ್ಟು ಅಂಚೆ ಇಲಾಖೆಗಳ ಮೂಲಕ ಪತ್ರದ ರೂಪ ತಾಳಿ ಪತ್ರವ್ಯವಹಾರ ಪ್ರಾರಂಭವಾಯಿತು. ಇಂದು ದೂರವಾಣಿ ,ಮೊಬೈಲ್ ,ಗಣಕಯಂತ್ರ ಗಳು ಬಂದ ಮೇಲೆ ಪತ್ರವ್ಯವಹಾರವು ತನ್ನ ಮೊದಲಿನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಇಂದು ಅಂತರ್ಜಾಲ ಸೌಲಭ್ಯದಿಂದಾಗಿ ಹೆಚ್ಚಿನ ಸಂದೇಶಗಳು ಮಿಂಚಂಚೆಯ (mail) ಮೂಲಕ ರವಾನೆಯಾಗುತ್ತಿವೆ. ಮೊಬೈಲ್‌ನಲ್ಲಿ ಎಷ್ಟೋ ದೂರದಲ್ಲಿರುವವರಿಗೆ whatsapp ,hike ,telegram ಇವೇ ಮೊದಲಾದ ವ್ಯವಸ್ಥೆಗಳ ಮೂಲಕ ಕ್ಷಣ ಮಾತ್ರದಲ್ಲಿ ಸಂದೇಶವನ್ನು ರವಾನಿಸಬಹುದಾಗಿದೆ. ಹಾಗಾಗಿ ಇಂದು ಪತ್ರ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ...

ಕನ್ನಡ ವ್ಯಾಕರಣ

ಕನ್ನಡ ವ್ಯಾಕರಣ ಕನ್ನಡ ಪಠ್ಯ ಕ್ರಮ 1. ವ್ಯಾಕರಣ 2. ಛಂದಸ್ಸು 3 ಅಲಂಕಾರ 4. ಸಾಹಿತ್ಯ ಚರಿತ್ರೆ I. ವ್ಯಾಕರಣ ಭಾಷೆಯ ಸ್ವರೂಪ ಜ್ನಾನ ಅರ್ಥಗಳಲ್ಲದೆ ಉಚ್ಛಾರ ಶೃತಿಗಳನ್ನು ವ್ಯವಸ್ಥಿತವಾಗಿ ನಿಯಮಗಳ ಮೂಲಕ ತಿಳೀಸುವುದೇ ವ್ಯಾಕರಣ ಶಾಸ್ತ ವ್ಯಾಕರಣದ ಬಗ್ಗೆ ತಿಳಿಸುವುವರು ವೈಯಾಕರಣಿಗಳು II ಛಂದಸ್ಸು ಕಾವ್ಯರಚನೆ ಸೌಂಧರ್ಯ ಸೊಭಗತೆಯನ್ನು ಸೂತ್ರ ರೊಪದಲ್ಲಿ ಪರಿಚಯಿಸುದೇ ಛಂದಸ್ಸು ಶಾಸ್ತ್ರ II. ಅಲಂಕಾರಗಳು ಕಾವ್ಯದೇವಿಯನ್ನು ಶಬ್ಧ ಅರ್ಥಗಳ ಉಡುಗೆತೊಡಿಗೆಗಳಿಂದ ಶೋಭಿಸುವಂತೆ ಅಲಂಕರಿಸುವುದೇ ಅಲಂಕಾರ ಶಾಸ್ತ್ರ ಮೇಲಿನ ಮೂರು ಪ್ರಕರಣ ಅಂದರೆ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರಗಳನ್ನೊಳಗೊಂಡ ಗ್ರಂಥಕ್ಕೆ ಲಕ್ಷಣ ಗ್ರಂಥ ಎನ್ನುವರು. ಮೊಟ್ಟ ಮೊದಲಿಗೆ ಹಳಗನ್ನಡದಲ್ಲಿ ವ್ಯಾಕರಣದ ಬಗ್ಗೆ ಹೇಳಿದವನು 1. 2ನೇ ನಾಗವರ್ಮ ಅಥವಾ ಇಮ್ಮಡಿ ನಾಗವರ್ಮ ಕಾಲ: 11ನೇ ಶತಮಾನ ಕೃತಿಗಳು 1. ಕರ್ನಾಟಕ ಭಾಷಾ ಭೂಷಣ 2. ಕಾವ್ಯಾವಲೋಕನ 3. ವರ್ಧಮಾನ ಪುರಾಣ 4. ಅಭಿದಾನ ವಸ್ತು ಕೋಶ 5. ಛಂದೋ ವಿಚಿತಿ 2. ಕನ್ನಡ ಶ್ರೇಷ್ಠ ವೈಯಾಕರಣಿ ಮತ್ತು ಶ್ರೇಷ್ಠ ಗ್ರಂಥ ಕೇಶಿ ರಾಜ ಕಾಲ: 13 ನೇ ಶತಮಾನ (1260) ಶ್ರೇಷ್ಠ ಕೃತಿ: ಶಬ್ಧಮಣಿದರ್ಪಣ ಇದರಲ್ಲಿ 8 ಭಾಗಗಳಿವೆ 3. ಭಟ್ಟಾಕಳಂಕಾ ಕಾಲ: 16 ಮತ್ತು 17 ನೆ ಶತಮಾನ ಕೃತಿ : ಶಬ್ಢ ಅನುಶಾಸನ. ಇದು ಸಂಸ್ಕೃತದಲ್ಲಿದೆ ಪ್ರಸ್ತುತ ಕನ್ನಡ ವರ್ಣಮಾಲೆ 49 ಸ್ವರಗಳು ಕನ್ನಡದಲ್ಲಿ ಒಟ್ಟು...
Do try this - it's pretty accurate I think.....😅😅 In the middle of the table was a round food tray with 5 kinds of fruit in it. There are: a. Apple b. Banana c. Mango d. Grapes e. Orange Which fruit will u choose? Your choice reveals about u! Pls be very Honest to yourself….. & Now scroll down for results: . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . Here are the results. A. if you chosen Apple : that means you are a person who loves to eat Apple B. if you chosen banana : that means you are a person who loves to eat Banana C. if you chosen mango : that means you are a person who loves to eat mango D. if you chosen grapes : that means you are a person who loves to eat grapes E. if you chosen orange : that means you are person who loves to eat Orange Note: If you are hunting for me to punch …..Well…I am busy hunting for th...