🙏
*ಶಿವ_ಪೂಜೆಯಲ್ಲಿ_ಕರಡಿ_ಬಿಟ್ಟ_ಹಾಗೆ*
ತಪ್ಪು ವಾಕ್ಯ
*ಶಿವ ಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ*
ಸರಿ ವಾಕ್ಯ.
ಕರಡಿ= ಜಾಂಬವಂತ
ಕರಡಿಗೆ= ಲಿಂಗವನ್ನು ಇಡಲು ಬಳಸುವ ಬೆಳ್ಳಿಯ/ಬಂಗಾರದ ಡಬ್ಬಿ.
ಸಾಮಾನ್ಯವಾಗಿ ವೀರಶೈವರು ಲಿಂಗವನ್ನು ಕರಡಿಗೆಯಲ್ಲಿ ಇಟ್ಟು ಶಿವ ದಾರದಿಂದ ಕಟ್ಟಿ ಕೊರಳಿಗೆ ಧರಿಸಿರುತ್ತಾರೆ.
ಶಿವ ಪೂಜೆಯ ಸಂದರ್ಭದಲ್ಲಿ *ಕರಡಿಗೆ* ಅಂದರೆ ಡಬ್ಬಿಯಲ್ಲಿರುವ ಇಷ್ಟ ಲಿಂಗವನ್ನು ಹೊರ ತೆಗೆದು ಪೂಜಿಸುತ್ತಾರೆ.
ಶಿವಪೂಜೆಯಲ್ಲಿ ಕರಡಿಗೆಯಲ್ಲಿರುವ ಲಿಂಗವೇ ಪ್ರಮುಖವಾಗಿರುವುದರಿಂದ ಲಿಂಗವಿರುವ ಕರಡಿಗೆಯಿಲ್ಲದೆ ಶಿವಪೂಜೆ ಪೂರ್ಣವಾಗುವುದಿಲ್ಲ, ವ್ಯರ್ಥ, ಅದು ಶಿವ ಪೂಜೆಯೇ ಅಲ್ಲ ಎಂಬುದು *ಶಿವ ಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ*
ಅರ್ಥಾತ್.. ಕರಡಿಗೆಯಲ್ಲಿರುವ ಲಿಂಗ ಮರೆತು ಶಿವನನ್ನು ಪೂಜಿಸಿದ ಹಾಗೆ ಎಂಬುದು ಈ ಗಾದೆಯ ಅರ್ಥ.
*ಕರಡಿಗೆ"* ಪದದ ಅರ್ಥವನ್ನು ಸರಿಯಾಗಿ ಅರ್ಥೈಸಿಕೊಳ್ಳದ ನಾವುಗಳು ಇಂದಿಗೂ ಸಹ ಶಿವಪೂಜೆ ಮಧ್ಯದಲ್ಲಿ ಕರಡಿಯನ್ನೇ ಬಿಡುತ್ತಿದ್ದೇವೆ, ಜೊತೆಗೆ ಆಗಾಗ ಹುಲಿ, ಸಿಂಹ, ನರಿ, ತೋಳಗಳನ್ನೆಲ್ಲಾ ಬಿಟ್ಟಿದ್ದೇವೆ.
ಸೋ ಇನ್ಮೇಲಾದರೂ ಶಿವಪೂಜೆಯ ಜೊತೆಯಲ್ಲಿ ಕರಡಿಗೆ ಮಾತ್ರ ಸೇರಿಸಿ.
*ಕರಡಿ* ಯನ್ನು ಅದರ ಪಾಡಿಗೆ ಅದನ್ನು ಬಿಟ್ಟು ಬಿಡಿ ಕಾಡಲ್ಲಿ ಓಡಾಡ್ಕೊಂಡು ಇರಲಿ!🐻
🙏😁

Comments
Post a Comment