Skip to main content
ಸರ್ವರಿಗೂ 69ನೇ "ಗಣರಾಜ್ಯೋತ್ಸವ"ದ ಶುಭಾಶಯಗಳು.

ಈ ಮಾಹಿತಿಯನ್ನು ತಪ್ಪದೇ ಓದಿರಿ ಸಾಧ್ಯವಾದಷ್ಟು ಪ್ರಸಾರ ಮಾಡಿ

#ದೇಶಭಕ್ತರಿಗೆ_ಸ್ಫೂರ್ತಿದಾಯಕವಾಗಿರುವ ‘#ವಂದೇ_ಮಾತರಂ’ #ಗೀತೆಯ_ಇತಿಹಾಸ

‘ವಂದೇ ಮಾತರಂ’ ಇದು ಭಾರತದ ರಾಷ್ಟ್ರಗೀತೆಎಂದು ಪ್ರಸಿದ್ಧವಾಗಿದೆ. ಅದರಲ್ಲಿರುವ ವಂದೇಮಾತರಂ ಈ ಎರಡು ಶಬ್ದಗಳಿಗೆ ಬಹಳ ಮಹತ್ವವುಲಭಿಸಿದೆ. ಅನೇಕ ರಾಷ್ಟ್ರಭಕ್ತರಿಗೆನ್ಯಾಯಾಲಯದಲ್ಲಿ ಕಠಿಣ ಶಿಕ್ಷೆಗಳಾದಾಗ, ಅನೇಕಕ್ರಾಂತಿಕಾರರು ನಗುನಗುತ್ತಾ ಗಲ್ಲಿನ ಕುಣಿಕೆಗೆ ತಮ್ಮಕುತ್ತಿಗೆಯನ್ನು ಒಡ್ಡುವಾಗ ಅವರಿಗೆ ಈ ಎರಡುಶಬ್ದಗಳೇ ನೆನಪಾಗುತ್ತಿದವು. ಈ ಹಿನ್ನೆಲೆಯಲ್ಲಿವಂದೇ ಮಾತರಂನ ಇತಿಹಾಸವನ್ನು ನಾವೀಗತಿಳಿದುಕೊಳ್ಳೋಣ.

ಮಾತೃಭೂಮಿಯ ಹಿರಿಮೆಯೇ ಹಿಂದೂಸಂಸ್ಕೃತಿಯ ಮುಖ್ಯ ಸೂತ್ರವಾಗಿದೆ. ಪ್ರಭುಶ್ರೀರಾಮಚಂದ್ರನಿಂದ ಹಿಡಿದು ಶಿವಾಜಿಮಹಾರಾಜರವರೆಗೆ ಎಲ್ಲರಿಗೂ ಮಾತೃಭೂಮಿಯಒಲವಿದೆ. ರಾವಣನ ವಧೆಯಾದ ನಂತರ ಕೆಲವರುಶ್ರೀರಾಮನಿಗೆ ಲಂಕೆಯಲ್ಲಿಯೇ ಉಳಿಯಲುಹೇಳಿದಾಗ, ಶ್ರೀ ರಾಮಚಂದ್ರನು ‘ಜನನೀಜನ್ಮಭೂಮಿಶ್ಚ ಸ್ವರ್ಗಾದಪೀ ಗರಿಯಸಿ’ ಎಂದುನೀಡಿದ ಉತ್ತರವು ಅತ್ಯಂತ ಸುಪ್ರಸಿದ್ಧವಾಗಿದೆ.ಪ್ರಭು ಶ್ರೀರಾಮಚಂದ್ರನೇ ಸ್ವತಃ,‘ನನ್ನ ಮಾತೆ ಮತ್ತುಮಾತೃಭೂಮಿಯು ನನಗೆ ಸ್ವರ್ಗಕ್ಕಿಂತಲೂಪ್ರಿಯವಾಗಿದೆ’ ಎನ್ನುತ್ತಾನೆ.

ಸುಜಲಾಂ, ಸುಫಲಾಂ ಮತ್ತು ಸಸ್ಯಶ್ಯಾಮಲೆಯಾಗಿರುವ ಈ ಭೂಮಿಯು ಯಾವದೇಶಭಕ್ತನಿಗೆ ವಂದನೀಯವಾಗಿಲ್ಲ?ಐಶ್ವರ್ಯದಾಯಿ, ಪುಣ್ಯಪ್ರದವಾದ ಹಾಗೂಸಮೃದ್ಧವಾದಂತಹ ಈ ಭೂಮಿಯನ್ನು ಯಾರುತಾನೇ ವಂದಿಸಲಾರರು? ಈ ಗೀತೆಯಭಾವಾರ್ಥವನ್ನು ನೋಡಿದಾಗ ಈಭಾರತಭೂಮಿಯ ಬಗ್ಗೆ ಅಭಿಮಾನದಿಂದ ಎದೆತುಂಬಿ ಬರುತ್ತದೆ. ಬಂಕಿಮಚಂದ್ರರು ಈ ರಾಷ್ಟ್ರೀಯಮಹಾಮಂತ್ರ ‘ವಂದೇ ಮಾತರಂ’ ಗೀತೆಯನ್ನುನವಂಬರ ೭,೧೮೭೫ ರಂದು ಬರೆದರು. ಆ ದಿನವುಕಾರ್ತಿಕ ಶುಕ್ಲ ನವಮಿಯಾಗಿತ್ತು. ಬಂಕಿಮಚಂದ್ರರುಬರೆದ ‘ಆನಂದಮಠ’ ಎಂಬ ಕಾದಂಬರಿಯಲ್ಲಿ ಈಗೀತೆಯನ್ನು ಪ್ರಕಟಿಸಲಾಗಿದೆ. ಈ ಗೀತೆಯಭಾಷೆಯು ಸಂಸ್ಕೃತ ಪ್ರಾಬಲ್ಯವಿರುವಂತಹದ್ದಾಗಿದೆ. ಇ.ಸ.೧೭೭೨ ರಲ್ಲಿಮುಸಲ್ಮಾನ ಮತ್ತು ಆಂಗ್ಲರ ದಬ್ಬಾಳಿಕೆಯ ವಿರುದ್ಧಬಂಗಾಲದಲ್ಲಿ ಸಂನ್ಯಾಸಿಗಳು ನಡೆಸಿದ ಸಶಸ್ತ್ರಹೋರಾಟದ ಮಾಹಿತಿಯು ಈ ಕಾದಂಬರಿಯಲ್ಲಿದೆ.

೧೯೦೫ರಲ್ಲಿ ಲಾರ್ಡ್ ಕರ್ಝನ್‌ನು ಬಂಗಾಲವಿಭಜನೆಯನ್ನು ಬಹಿರಂಗ ಪಡಿಸಿದನು.ವಿಭಜನೆಯು ರದ್ದಾಗಬೇಕು ಎಂದು ಇಡೀಬಂಗಾಲವು ಸಿಡಿದೆದ್ದಿತು. ‘ವಂದೇ ಮಾತರಂ’ ಎಂಬಎರಡೇ ಶಬ್ದಗಳಿಂದ ಇಡೀ ಬಂಗಾಲವುತುಂಬಿಹೋಯಿತು. ಇದೇ ಎರಡು ಶಬ್ದಗಳಿಂದಆಂಗ್ಲರ ಕ್ರೋಧವು ಕಾಲಿನಿಂದ ನೆತ್ತಿಗೇರಿತು.ಕರ್ಝನ್‌ನ ಪಟ್ಟ ಶಿಷ್ಯನಾದ ಬಂಗಾಲದಗರ್ವನರನು ‘ವಂದೇ ಮಾತರಂ’ ಈ ಶಬ್ದಗಳಮೇಲೆ ಕಾನೂನುರೀತ್ಯಾ ನಿಷೇಧವನ್ನು ಹೇರಿದನು.ನಿಷೇಧವನ್ನು ಹೇರಿದೊಡನೆ ಬಂಗಾಲದ ‘ವಂದೇಮಾತರಂ’ ಗೀತೆಯು ಹಿಂದೂಸ್ಥಾನವಿಡೀವ್ಯಾಪಿಸಿತು. ಅದು ಒಂದು ರಾಷ್ಟ್ರೀಯಮಹಾಮಂತ್ರವಾಯಿತು. ‘ವಂದೇ ಮಾತರಂ’ಗೀತೆಯು ದೇಶಭಕ್ತರ ಅತ್ಯಂತ ಪ್ರಿಯವಾದಶಬ್ದವಾಯಿತು. ಆಗಸ್ಟ್ ೬,೧೯೦೬ರಲ್ಲಿಬಂಗಾಲದಲ್ಲಿ ‘ವಂದೇ ಮಾತರಂ’ ಎಂಬ ಹೆಸರಿನಆಂಗ್ಲ ದೈನಿಕವು ಪ್ರಾರಂಭವಾಯಿತು. ಸ್ವಾತಂತ್ರ್ಯಚಳುವಳಿಯ ಪ್ರತಿಯೊಂದು ಕಾರ್ಯಕ್ರಮವು‘ವಂದೇ ಮಾತರಂ’ ಗೀತೆಯನ್ನು ಹಾಡದೇಮುಕ್ತಾಯವಾಗುತ್ತಿರಲಿಲ್ಲ. ಸಹೋದರಿನಿವೇದಿತಾರವರು ಕೊಲಕತ್ತಾ ಕಾಂಗ್ರೆಸ್‌ನಲ್ಲಿಮಂಡಿಸಿದ ರಾಷ್ಟ್ರಧ್ವಜದ ಮೇಲೆ ಮತ್ತುಮ್ಯಾಡಮ್ ಕಾಮಾ ಇವರು ಜರ್ಮನಿಯಲ್ಲಿನಅಂತರಾಷ್ಟ್ರೀಯ ಸಮಾಜವಾದಿ ಪರಿಷತ್ತಿನಲ್ಲಿ೧೯೦೮ ರಲ್ಲಿ ಹಾರಿಸಿದ ಹಿಂದಿ ರಾಷ್ಟ್ರಧ್ವಜದ ಮೇಲೆ‘ವಂದೇ ಮಾತರಂ’ ಶಬ್ದಗಳನ್ನು ದೇವನಾಗರಿಲಿಪಿಯಲ್ಲಿ ಎದ್ದುಕಾಣುವಂತೆ ಬರೆಯಲಾಗಿತ್ತು.ಅಖಿಲ ಭಾರತೀಯ ಕಾಂಗ್ರೆಸ್ ಅಧಿವೇಶನಗಳು‘ವಂದೇ ಮಾತರಂ’ ಗೀತೆಯಿಂದಪ್ರಾರಂಭವಾಗತೊಡಗಿದವು. ‘ವಂದೇ ಮಾತರಂ’ಗೀತೆಯಿಂದ ತಲೆಯ ಮೇಲೆ ಬೀಳುವ ಲಾಠಿಯಏಟುಗಳು ಮತ್ತು ಬರಿ ಮೈಮೇಲೆ ಬೀಳುವ ಬೆತ್ತದಬಾಸುಂಡೆಗಳನ್ನು ಸಹಿಸುವ ಸಾಮರ್ಥ್ಯವು,ಕ್ರಾಂತಿಕಾರರಿಗೆ ಹಾಗೆಯೇ ಸಾಮಾನ್ಯ ಜನರಿಗೆಪ್ರಾಪ್ತವಾಯಿತು.

೧೯೦೫ರಲ್ಲಿ ವಾರಣಾಸಿಯಲ್ಲಿ (ಆಂಗ್ಲಭಾಷೆಯಲ್ಲಿಬನಾರಸ್) ಕಾಂಗ್ರೆಸ್‌ನ ೨೧ನೆಯಅಧಿವೇಶನವನ್ನು ಏರ್ಪಡಿಸಲಾಗಿತ್ತು. ಈಅಧಿವೇಶನದಲ್ಲಿ ಸೇರಿದ್ದ ಪ್ರತಿನಿಧಿಗಳಒತ್ತಾಯದಿಂದ ಪ್ರಸಿದ್ಧ ಬಂಗಾಲಿ ಕವಯತ್ರಿ ಮತ್ತುಗಾಯಕಿ ಸರಳಾದೇವಿ ಚೌಧುರಣಿಯವರುಸಂಪೂರ್ಣ ‘ವಂದೇ ಮಾತರಂ’ ಗೀತೆಯನ್ನುಹಾಡಿದರು. ಈಗಂತೂ ನಾವು ‘ವಂದೇ ಮಾತರಂ’ಗೀತೆಯ ಒಂದು ವಾಕ್ಯವನ್ನು ಮಾತ್ರಹೇಳುತ್ತಿದ್ದೇವೆ. ಹೊಸ ಪೀಳಿಗೆಗೆ ಈ ಗೀತೆಯುಎಷ್ಟು ಶ್ರೇಷ್ಠವಾಗಿದೆ ಎಂಬ ವಿಷಯವೇ ತಿಳಿದಿಲ್ಲ.

#ರವೀಂದ್ರನಾಥ_ಠಾಗೋರರಿಂದ_ಮೊದಲಸಾರ್ವಜನಿಕ_ಗಾಯನ

‘ವಂದೇ ಮಾತರಂ’ ಗೀತೆಯನ್ನು ಮೊದಲುಕೊಲಕತ್ತಾ ಕಾಂಗ್ರೆಸ್‌ನಲ್ಲಿ ಇ.ಸ.೧೮೯೬ರಲ್ಲಿಕವಿಶ್ರೇಷ್ಠ ರವೀಂದ್ರನಾಥ ಠಾಗೋರರುಸಾರ್ವಜನಿಕವಾಗಿ ಹಾಡಿದರು. ಈ ಗೀತೆಗೆ ಅವರೇಸ್ವತಃ ಲಯವನ್ನು (ರಾಗ) ಹಾಕಿದ್ದರು. ಪಂಡಿತವಿಷ್ಣು ದಿಗಂಬರ ಪಲುಸ್ಕರರು ಕಾಫಿ ರಾಗದಲ್ಲಿನುಡಿಸಿದ ಲಯವು ವಿಶೇಷವಾಗಿ ಪ್ರಸಿದ್ಧವಾಯಿತು.ಕಾಫಿ ರಾಗದಂತೆ ಇತರ ರಾಗಗಳಲ್ಲಿಯೂ ಈಗೀತೆಯನ್ನು ಹಾಡಲಾಗಿದೆ. ಆದರೆ ಕಾಫಿರಾಗದಲ್ಲಿಯೇ ಈ ಗೀತೆಯಸಾರ್ವಜನಿಕರೀತಿಯಲ್ಲಿ ಹಾಡಲ್ಪಟ್ಟಿತು ಮತ್ತು ಅದುಮೊತ್ತಮೊದಲು ಲಾಹೋರನಲ್ಲಿ ದಿ.ಕೀರ್ತಿವಂತಪಂಡಿತ ಪಲುಸ್ಕರರ ಬಾಯಿಯಿಂದಲೇಹಾಡಲ್ಪಟ್ಟಿತು. ಆದರೆ ಇತ್ತೀಚೆಗೆ ಮಾತ್ರ ಸಾರಂಗರಾಗದಲ್ಲಿ ಆಕಾಶವಾಣಿಯಿಂದ ಪ್ರಸಾರವಾಗುತ್ತಿದೆ.

ಗುಡ್ ಮಾರ್ನಿಂಗ್ ಫ್ರೆಂಡ್ಸ್

ವಂದೇ ಮಾತರಂ ಜೈ ಹಿಂದ್🇮🇳

Comments

Popular posts from this blog

ಪತ್ರಲೇಖನ

ಪತ್ರಲೇಖನ ಪೀಠಿಕೆ ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ. ಪತ್ರಲೇಖನ ಒಂದು ಕಲೆ . ಹಿಂದೊಮ್ಮೆ ಇದು ಬಹಳ ಪರಿಣಾಮಕಾರಿಯಾದ ಸಂಪರ್ಕ ಸಾಧನವಾಗಿತ್ತು. ಪುರಾಣ ,ಕಾವ್ಯಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂದೇಶ ಕಳಿಸುವಾಗ ಪಾರಿವಾಳಗಳ ಮೂಲಕ ಕಳಿಸುವ ಪರಿಪಾಠವಿತ್ತು. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಸಂದೇಶವನ್ನು ಕಳಿಸಲು ಮೇಘಗಳನ್ನು ಬಳಸಿದ್ದನ್ನು ನೋಡಬಹುದು. ಕಾಲಾನಂತರದಲ್ಲಿ ಸಂದೇಶಗಳನ್ನು ಕಳಿಸಲು ದೂತರು ಕುದುರೆಯ ಮೇಲೆ ಸಾಗುತ್ತಿದ್ದರು. ಎಲೆಗಳ ಮೇಲೆ ಬರೆಯುತ್ತಿದ್ದ ಸಂದೇಶಗಳು ಕ್ರಮೇಣ ಕಾಗದಗಳ ಮೇಲೆ ಬರೆಯಲ್ಪಟ್ಟು ಅಂಚೆ ಇಲಾಖೆಗಳ ಮೂಲಕ ಪತ್ರದ ರೂಪ ತಾಳಿ ಪತ್ರವ್ಯವಹಾರ ಪ್ರಾರಂಭವಾಯಿತು. ಇಂದು ದೂರವಾಣಿ ,ಮೊಬೈಲ್ ,ಗಣಕಯಂತ್ರ ಗಳು ಬಂದ ಮೇಲೆ ಪತ್ರವ್ಯವಹಾರವು ತನ್ನ ಮೊದಲಿನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಇಂದು ಅಂತರ್ಜಾಲ ಸೌಲಭ್ಯದಿಂದಾಗಿ ಹೆಚ್ಚಿನ ಸಂದೇಶಗಳು ಮಿಂಚಂಚೆಯ (mail) ಮೂಲಕ ರವಾನೆಯಾಗುತ್ತಿವೆ. ಮೊಬೈಲ್‌ನಲ್ಲಿ ಎಷ್ಟೋ ದೂರದಲ್ಲಿರುವವರಿಗೆ whatsapp ,hike ,telegram ಇವೇ ಮೊದಲಾದ ವ್ಯವಸ್ಥೆಗಳ ಮೂಲಕ ಕ್ಷಣ ಮಾತ್ರದಲ್ಲಿ ಸಂದೇಶವನ್ನು ರವಾನಿಸಬಹುದಾಗಿದೆ. ಹಾಗಾಗಿ ಇಂದು ಪತ್ರ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ...

ಕನ್ನಡ ವ್ಯಾಕರಣ

ಕನ್ನಡ ವ್ಯಾಕರಣ ಕನ್ನಡ ಪಠ್ಯ ಕ್ರಮ 1. ವ್ಯಾಕರಣ 2. ಛಂದಸ್ಸು 3 ಅಲಂಕಾರ 4. ಸಾಹಿತ್ಯ ಚರಿತ್ರೆ I. ವ್ಯಾಕರಣ ಭಾಷೆಯ ಸ್ವರೂಪ ಜ್ನಾನ ಅರ್ಥಗಳಲ್ಲದೆ ಉಚ್ಛಾರ ಶೃತಿಗಳನ್ನು ವ್ಯವಸ್ಥಿತವಾಗಿ ನಿಯಮಗಳ ಮೂಲಕ ತಿಳೀಸುವುದೇ ವ್ಯಾಕರಣ ಶಾಸ್ತ ವ್ಯಾಕರಣದ ಬಗ್ಗೆ ತಿಳಿಸುವುವರು ವೈಯಾಕರಣಿಗಳು II ಛಂದಸ್ಸು ಕಾವ್ಯರಚನೆ ಸೌಂಧರ್ಯ ಸೊಭಗತೆಯನ್ನು ಸೂತ್ರ ರೊಪದಲ್ಲಿ ಪರಿಚಯಿಸುದೇ ಛಂದಸ್ಸು ಶಾಸ್ತ್ರ II. ಅಲಂಕಾರಗಳು ಕಾವ್ಯದೇವಿಯನ್ನು ಶಬ್ಧ ಅರ್ಥಗಳ ಉಡುಗೆತೊಡಿಗೆಗಳಿಂದ ಶೋಭಿಸುವಂತೆ ಅಲಂಕರಿಸುವುದೇ ಅಲಂಕಾರ ಶಾಸ್ತ್ರ ಮೇಲಿನ ಮೂರು ಪ್ರಕರಣ ಅಂದರೆ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರಗಳನ್ನೊಳಗೊಂಡ ಗ್ರಂಥಕ್ಕೆ ಲಕ್ಷಣ ಗ್ರಂಥ ಎನ್ನುವರು. ಮೊಟ್ಟ ಮೊದಲಿಗೆ ಹಳಗನ್ನಡದಲ್ಲಿ ವ್ಯಾಕರಣದ ಬಗ್ಗೆ ಹೇಳಿದವನು 1. 2ನೇ ನಾಗವರ್ಮ ಅಥವಾ ಇಮ್ಮಡಿ ನಾಗವರ್ಮ ಕಾಲ: 11ನೇ ಶತಮಾನ ಕೃತಿಗಳು 1. ಕರ್ನಾಟಕ ಭಾಷಾ ಭೂಷಣ 2. ಕಾವ್ಯಾವಲೋಕನ 3. ವರ್ಧಮಾನ ಪುರಾಣ 4. ಅಭಿದಾನ ವಸ್ತು ಕೋಶ 5. ಛಂದೋ ವಿಚಿತಿ 2. ಕನ್ನಡ ಶ್ರೇಷ್ಠ ವೈಯಾಕರಣಿ ಮತ್ತು ಶ್ರೇಷ್ಠ ಗ್ರಂಥ ಕೇಶಿ ರಾಜ ಕಾಲ: 13 ನೇ ಶತಮಾನ (1260) ಶ್ರೇಷ್ಠ ಕೃತಿ: ಶಬ್ಧಮಣಿದರ್ಪಣ ಇದರಲ್ಲಿ 8 ಭಾಗಗಳಿವೆ 3. ಭಟ್ಟಾಕಳಂಕಾ ಕಾಲ: 16 ಮತ್ತು 17 ನೆ ಶತಮಾನ ಕೃತಿ : ಶಬ್ಢ ಅನುಶಾಸನ. ಇದು ಸಂಸ್ಕೃತದಲ್ಲಿದೆ ಪ್ರಸ್ತುತ ಕನ್ನಡ ವರ್ಣಮಾಲೆ 49 ಸ್ವರಗಳು ಕನ್ನಡದಲ್ಲಿ ಒಟ್ಟು...
Do try this - it's pretty accurate I think.....😅😅 In the middle of the table was a round food tray with 5 kinds of fruit in it. There are: a. Apple b. Banana c. Mango d. Grapes e. Orange Which fruit will u choose? Your choice reveals about u! Pls be very Honest to yourself….. & Now scroll down for results: . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . Here are the results. A. if you chosen Apple : that means you are a person who loves to eat Apple B. if you chosen banana : that means you are a person who loves to eat Banana C. if you chosen mango : that means you are a person who loves to eat mango D. if you chosen grapes : that means you are a person who loves to eat grapes E. if you chosen orange : that means you are person who loves to eat Orange Note: If you are hunting for me to punch …..Well…I am busy hunting for th...