Skip to main content
#ಕಾಣೆಯಾದ_ಭುಜಗಳು

🙏🙏🙏

ಗೋವಿಂದ ರಾಯರಿಗೆ
ಅತೀವ ಸಂತೋಷವಾಗಿತ್ತು.
ತಮ್ಮನ್ನು ತಾವು ಭಾಗ್ಯಶಾಲಿ ಎಂದು ಭಾವಿಸುತ್ತಿದ್ದರು..

ಈ ಪ್ರಪಂಚದಲ್ಲಿ ಗೋವಿಂದ ರಾಯರು ಅಷ್ಟು ಅದೃಷ್ಟವಂತರು ಯಾರು ಇಲ್ಲ ಎಂದು ಜನರು ಮಾತಾನಾಡುತ್ತಿರುವಾಗ ರಾಯರಿಗೆ ವಿಪರೀತ ಅನಂದ...

ಆ ಅನಂದಕ್ಕೆ ಕಾರಣ
ರಾಯರ ಇಬ್ಬರು ಗಂಡು ಮಕ್ಕಳು

#ಐಐಟಿ ಅನ್ನು #ಮೊದಲು_ರ್ಯಾಂಕನಲ್ಲಿ ಪಾಸ್ ಅಗಿ ದೂರದ #ಅಮೇರಿಕಾದ ಪ್ರಪಂಚ ಪ್ರಖ್ಯಾತ ಕಂಪನಿಯಲ್ಲಿ  #ತಿಂಗಳಿಗೆ #ಒಂದು_ಕೋಟಿ #ವೇತನಕ್ಕೆ ಕೆಲಸ ಮಾಡುತ್ತಿದ್ದರು..

ರಾಯರು ತಮ್ಮ ನೌಕರಿಯಿಂದ #ನಿವೃತ್ತರಾದರು..

ರಾಯರ ಇಚ್ಚೆ ಅಗಿತ್ತು..
ತಮ್ಮ ಇಬ್ಬರ ಮಕ್ಕಳಲ್ಲಿ ಒಬ್ಬರು ತಮ್ಮ ಜೊತೆಯಲ್ಲಿ ಇರಬೇಕೆಂದು ತಮ್ಮ ಇಚ್ಛೆಯನ್ನು ಮಕ್ಕಳಿಗೆ ತಿಳಿಸಿದರು.. ಮಕ್ಕಳು ನೀವು ಇಲ್ಲಿಗೆ ಬಂದು ಬೀಡಿ ಇಲ್ಲಿಯೇ ಎಲ್ಲರೂ ಸಂತೋಷದಿಂದ ಇರೋಣ ಎಂದರು.

ಮಕ್ಕಳ ಇಚ್ಚೆಯಂತೆ ರಾಯರು ಮತ್ತು ಅವರ ಪತ್ನಿ ರಾಧ ಅಮೇರಿಕಗೆ ಹೋದರು..

ಅದರೆ ಅಲ್ಲಿನ ವಾತವರಣದಲ್ಲಿ
ಒಂದು ವಾರ ಕಳೆಯುವುದು ಅವರಿಗೆ ಕಷ್ಟವಾಗಿತ್ತು..

ವಾರದ ನಂತರ ಪತಿ , ಪತ್ನಿ ಇಬ್ಬರು ಭಾರತಕ್ಕೆ ಮರಳಿ ಬಂದರು..

ದುರದೃಷ್ಟವಶಾತ್
ಮರಳಿ ಬಂದ ವಾರದ ನಂತರ
ರಾಯರ ಪತ್ನಿ ರಾಧ ಅವರಿಗೆ #ಲಕ್ವ ಹೊಡೆಯಿತು..

ರಾಯರ ಪತ್ನಿ ರಾಧ ಮಂಚಕ್ಕೆ ಸೀಮಿತವಾದರು , ರಾಯರು ಪತ್ನಿಯ ಎಲ್ಲ ದೈನಂದಿನ ಕೆಲಸಗಳನ್ನು  ತಾನೇ ಮಾಡಲು ಶುರು ಮಾಡಿದರು.

ಪತ್ನಿಯ , ಪಾಲನೆ , ಊಟ ಮಾಡಿಸುವುದು , ಬಟ್ಟೆ ಹೊಗೆಯುವುದು , ಸಮಯಕ್ಕೆ ಸರಿಯಾಗಿ ಔಷಧಿ ಕೊಡುವುದು ಎಲ್ಲವನ್ನೂ ರಾಯರು ಮಾಡುತ್ತಿದ್ದರು..

ರಾಯರ ಪತ್ನಿಗೆ ಲಕ್ವ ಹೊಡೆದ ಕಾರಣ ಮಾತನಾಡುವುದಕ್ಕೆ ಬಹಳ ಕಷ್ಟ ಅಗಿತ್ತು..

ರಾಯರು ತನು ಮನದಿಂದ ಪತ್ನಿಯ ಸೇವೆ ಮಾಡುತ್ತಿದ್ದರು.

ಎಂದಿನಂತೆ ಪತ್ನಿಗೆ ರಾತ್ರಿಯ ಔಷಧೀ ಕೊಟ್ಟು ಅವರು ಮಲಗಿದ ಮೇಲೆ ತಾನು ಪಕ್ಕದ ಕೋಣೆಯಲ್ಲಿ ಇದ್ದ ಮಂಚದ ಮೇಲೆ ಹತ್ತಿ ಮಲಗಿದರು.‌.

ರಾತ್ರಿ ಎರಡು ಗಂಟೆ ಸಮಯ ರಾಯರಿಗೆ ತೀವ್ರವಾದ ಹೃದಯಘಾತವಾಗಿ , ಇಹಲೋಕ ತ್ಯಜಿಸಿದರು..

ಬೆಳಗ್ಗೆ ಅರು ಗಂಟೆಗೆ ರಾಯರ ಪತ್ನಿ ರಾಯರ ಗೋಸ್ಕರ ಎದುರು ನೋಡಲು ಶುರು ಮಾಡಿದರು .. ಯಾಕೆಂದರೆ ದೈನಂದಿನ ಕಾರ್ಯಗಳನ್ನು ಮುಗಿಸಲು ರಾಯರ ಸಹಾಯ ಬೇಕಾಗಿತ್ತು.. ರಾಯರ ಪತ್ನಿಗೆ ನಡೆಯಲು ಬರುತ್ತಿರಲಿಲ್ಲ..

ಎದುರು ನೋಡಿ ನೋಡಿ
ರಾಯರ ಪತ್ನಿಗೆ ಯಾವುದೋ ಅಶುಭ ನಡೆದಿದೆ ಎನ್ನುವ ಅನುಮಾನ ಬಂದಿತು...

ತನ್ನನ್ನು ತಾನು ಮಂಚದಿಂದ ಕೆಳಗೆ ಬಿಳಿಸಿದಳು.
ಮತ್ತು ಉರುಳಿಕೊಂಡು ರಾಯರ ಕೋಣೆಯ ಕಡೆ ಕಷ್ಟಪಟ್ಟು ಬಂದಳು...

ರಾಯರು ಹೃದಯಾಘಾತದಿಂದ ಮರಣ ಹೊಂದಿ ಕೆಳಗೆ ಬಿದ್ದಿದ್ದರು..

ಬಂದವರು ಪತ್ನಿಯನ್ನು ಅಲುಗಾಡಿಸಲು ಶುರು ಮಾಡಿದರು ಅದರೆ ಪತಿಯಲ್ಲಿ ಯಾವುದೇ ಚಲನವಲನ ಇರಲಿಲ್ಲ..

ರಾಯರ ಪತ್ನಿಗೆ ಅರ್ಥವಾಗಿತ್ತು
ರಾಯರು ಇಹಲೋಕ ತ್ಯಜಿಸಿದ್ದಾರೆ ಎಂದು..

ಲಕ್ವ ಹೊಡೆದಿದ್ದರಿಂದ ಅವರ ಮಾತು ನಿಂತು ಹೋಗಿತ್ತು.

ಯಾರನ್ನು ಕರೆಯುವಷ್ಟು ಶಕ್ತಿ ಅವರಲ್ಲಿ ಇರಲಿಲ್ಲ..

ಮನೆಯಲ್ಲಿ ಯಾರು ಇರಲಿಲ್ಲ..
ಫೋನ್ ಹೊರಗಡೆ ಹಾಲ್ ನಲ್ಲಿ ಇತ್ತು...

ಪಕ್ಕದ ಮನೆಯವರಿಗೆ ಸೂಚನೆ ಕೊಡಲು ಉರುಳಿಕೊಂಡು ಹಾಲ್ ಗೆ ಬರಲು ನಾಲ್ಕು ಗಂಟೆ ಸಮಯ ಬೇಕಾಗಿತ್ತು..

ಪಕ್ಕದ ಮನೆಯವರಿಗೆ ಫೋನ್ ಮಾಡಲು ಪ್ರಯತ್ನ ಪಡುತ್ತಿದ್ದಳು ಸುಮಾರು ಒಂದು ತಾಸು ಪ್ರಯತ್ನ ಪಟ್ಟ ಕಾರಣ ಕೊನೆಯಲ್ಲಿ ಪಕ್ಕದ ಮನೆಯವರಿಗೆ ಪೋನ್ ಅತ್ತಿತ್ತು.

ಪಕ್ಕದ ಮನೆಯವರು ಫೋನ್ ಎತ್ತಿದರು ಅದರೆ ರಾಯರ ಮನೆಯಿಂದ ಮಾತು ಬರುತ್ತಿರಲಿಲ್ಲ..

ಪಕ್ಕದ ಮನೆಯವರಿಗೆ ಅರ್ಥ ಅಗಿತ್ತು... ರಾಯರ ಮನೆಯಲ್ಲಿ ಎನೋ ಗಂಭೀರ ಸಮಸ್ಯೆ ಇದೆ ಎಂದು..

ಪಕ್ಕದ ಮನೆಯವರು ತಮ್ಮ ಅಕ್ಕ ಪಕ್ಕ ಇದ್ದ ಎಲ್ಲರಿಗೂ ವಿಷಯ ತಿಳಿಸಿ , ಎಲ್ಲರ ಜೊತೆಯಲ್ಲಿ ಬಂದು ರಾಯರ ಮನೆಯ ಬಾಗಿಲನ್ನು ಒಡೆದು ಒಳಗಡೆ ಬಂದರು...

ಅಲ್ಲಿನ ದೃಶ್ಯ ನೋಡಿ ಅಕ್ಕಪಕ್ಕದವರಿಗೆ ಆಘಾತ ಅಗಿತ್ತು..

ಗೋವಿಂದ ರಾಯರು ಕೋಣೆಯಲ್ಲಿ ಮರಣ ಹೊಂದಿದರು..

ಅವರ ಪತ್ನಿ ರಾಧ ಪೋನ್ ಹತ್ತಿರ ಮೃತರಾಗಿದ್ದರು..

ರಾಯರು ಮತ್ತು ಅವರ ಪತ್ನಿಯ ಶವ ಸಂಸ್ಕಾರ ಮಾಡಲು ಜೊತೆ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು...

ಅಕ್ಕ ಪಕ್ಕದವರು ತಮ್ಮ ಭುಜಗಳನ್ನು ಬದಲಿಸುತ್ತಿದ್ದರು..

ಯಾರ ಮೇಲೆ ಅವರಿಗೆ ನಂಬಿಕೆ ಇತ್ತು.. ಆ ಭುಜಗಳು
 ಮಾತ್ರ ಅಲ್ಲಿ ಇರಲಿಲ್ಲ..

ಅವರು ದೂರದ ಅಮೇರಿಕದಲ್ಲಿ ಡಾಲರ್ ಗಳಿಗೆ ತಮ್ಮ ಭುಜವನ್ನು ಅಸರೆ ಅಗಿ ಕೊಟ್ಟಿದ್ದರು...

ಜನರು ತೋಟಗಳನ್ನು ಬೆಳಸುತ್ತಾರೆ... ಫಲಗಳನ್ನು ಕೊಡಲು

ಮಕ್ಕಳನ್ನು ಸಾಕುತ್ತಾರೆ
ವಯಸ್ಸಾದ ನಂತರ ತಮಗೆ ಅಸರೆ ಅಗಲು.

ಕೆಲವು ಮಕ್ಕಳು ಮಾತ್ರ ತಮ್ಮ ಕರ್ತವ್ಯವನ್ನು ಪೂರೈಸುತ್ತಾರೆ..

ಇನ್ನು ಉಳಿದವರು
ಡಾಲರ್ , ಪೌಂಡ್ , ಯಾರೋ ,ಎನ್ ಮತ್ತು ರೂಪಾಯಿಗಳ ಹಿಂದೆ ದೇಶ ವಿದೇಶಗಳಲ್ಲಿ ಸುತ್ತುತ್ತಾರೆ..

ಒಬ್ಬ ಕವಿಯು ಅತಿ ಸುಂದರ ಪಂಕ್ತಿಗಳನ್ನು ಈ ರೀತಿಯಾಗಿ ಬರೆದಿದ್ದಾನೆ..

ಸೂರ್ಯ , ಚಂದ್ರರರನ್ನು ಮುಟ್ಟುವ ವಿದ್ಯೆಯನ್ನು ತಮ್ಮ ಮಕ್ಕಳಿಗೆ ಕಲಿಸಬೇಡಿ..

ಸೂರ್ಯ , ಚಂದ್ರರರನ್ನು ಮುಟ್ಟುವ ತವಕದಲ್ಲಿ
ತಮ್ಮನ್ನು ತಾವು ಮಾಯ ಮಾಡಿಕೊಳ್ಳುತ್ತಾರೆ...

ಯಾರು ಮಣ್ಣಿನ ಜೊತೆ ಸೇರಿ ಜೀವನ ಮಾಡುತ್ತಾರೆ..
ಅವರು ಮಾತ್ರ ಸಂಬಂಧಗಳನ್ನು ನಿಭಾಯಿಸುವರು...

✍🏻✍🏻✍🏻✍🏻✍🏻✍🏻✍🏻✍🏻✍🏻✍🏻✍🏻

Comments

Popular posts from this blog

ಪತ್ರಲೇಖನ

ಪತ್ರಲೇಖನ ಪೀಠಿಕೆ ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ. ಪತ್ರಲೇಖನ ಒಂದು ಕಲೆ . ಹಿಂದೊಮ್ಮೆ ಇದು ಬಹಳ ಪರಿಣಾಮಕಾರಿಯಾದ ಸಂಪರ್ಕ ಸಾಧನವಾಗಿತ್ತು. ಪುರಾಣ ,ಕಾವ್ಯಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂದೇಶ ಕಳಿಸುವಾಗ ಪಾರಿವಾಳಗಳ ಮೂಲಕ ಕಳಿಸುವ ಪರಿಪಾಠವಿತ್ತು. ಕಾಳಿದಾಸನ ಮೇಘ ಸಂದೇಶ ಕಾವ್ಯದಲ್ಲಿ ಸಂದೇಶವನ್ನು ಕಳಿಸಲು ಮೇಘಗಳನ್ನು ಬಳಸಿದ್ದನ್ನು ನೋಡಬಹುದು. ಕಾಲಾನಂತರದಲ್ಲಿ ಸಂದೇಶಗಳನ್ನು ಕಳಿಸಲು ದೂತರು ಕುದುರೆಯ ಮೇಲೆ ಸಾಗುತ್ತಿದ್ದರು. ಎಲೆಗಳ ಮೇಲೆ ಬರೆಯುತ್ತಿದ್ದ ಸಂದೇಶಗಳು ಕ್ರಮೇಣ ಕಾಗದಗಳ ಮೇಲೆ ಬರೆಯಲ್ಪಟ್ಟು ಅಂಚೆ ಇಲಾಖೆಗಳ ಮೂಲಕ ಪತ್ರದ ರೂಪ ತಾಳಿ ಪತ್ರವ್ಯವಹಾರ ಪ್ರಾರಂಭವಾಯಿತು. ಇಂದು ದೂರವಾಣಿ ,ಮೊಬೈಲ್ ,ಗಣಕಯಂತ್ರ ಗಳು ಬಂದ ಮೇಲೆ ಪತ್ರವ್ಯವಹಾರವು ತನ್ನ ಮೊದಲಿನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಇಂದು ಅಂತರ್ಜಾಲ ಸೌಲಭ್ಯದಿಂದಾಗಿ ಹೆಚ್ಚಿನ ಸಂದೇಶಗಳು ಮಿಂಚಂಚೆಯ (mail) ಮೂಲಕ ರವಾನೆಯಾಗುತ್ತಿವೆ. ಮೊಬೈಲ್‌ನಲ್ಲಿ ಎಷ್ಟೋ ದೂರದಲ್ಲಿರುವವರಿಗೆ whatsapp ,hike ,telegram ಇವೇ ಮೊದಲಾದ ವ್ಯವಸ್ಥೆಗಳ ಮೂಲಕ ಕ್ಷಣ ಮಾತ್ರದಲ್ಲಿ ಸಂದೇಶವನ್ನು ರವಾನಿಸಬಹುದಾಗಿದೆ. ಹಾಗಾಗಿ ಇಂದು ಪತ್ರ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ...

ಕನ್ನಡ ವ್ಯಾಕರಣ

ಕನ್ನಡ ವ್ಯಾಕರಣ ಕನ್ನಡ ಪಠ್ಯ ಕ್ರಮ 1. ವ್ಯಾಕರಣ 2. ಛಂದಸ್ಸು 3 ಅಲಂಕಾರ 4. ಸಾಹಿತ್ಯ ಚರಿತ್ರೆ I. ವ್ಯಾಕರಣ ಭಾಷೆಯ ಸ್ವರೂಪ ಜ್ನಾನ ಅರ್ಥಗಳಲ್ಲದೆ ಉಚ್ಛಾರ ಶೃತಿಗಳನ್ನು ವ್ಯವಸ್ಥಿತವಾಗಿ ನಿಯಮಗಳ ಮೂಲಕ ತಿಳೀಸುವುದೇ ವ್ಯಾಕರಣ ಶಾಸ್ತ ವ್ಯಾಕರಣದ ಬಗ್ಗೆ ತಿಳಿಸುವುವರು ವೈಯಾಕರಣಿಗಳು II ಛಂದಸ್ಸು ಕಾವ್ಯರಚನೆ ಸೌಂಧರ್ಯ ಸೊಭಗತೆಯನ್ನು ಸೂತ್ರ ರೊಪದಲ್ಲಿ ಪರಿಚಯಿಸುದೇ ಛಂದಸ್ಸು ಶಾಸ್ತ್ರ II. ಅಲಂಕಾರಗಳು ಕಾವ್ಯದೇವಿಯನ್ನು ಶಬ್ಧ ಅರ್ಥಗಳ ಉಡುಗೆತೊಡಿಗೆಗಳಿಂದ ಶೋಭಿಸುವಂತೆ ಅಲಂಕರಿಸುವುದೇ ಅಲಂಕಾರ ಶಾಸ್ತ್ರ ಮೇಲಿನ ಮೂರು ಪ್ರಕರಣ ಅಂದರೆ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರಗಳನ್ನೊಳಗೊಂಡ ಗ್ರಂಥಕ್ಕೆ ಲಕ್ಷಣ ಗ್ರಂಥ ಎನ್ನುವರು. ಮೊಟ್ಟ ಮೊದಲಿಗೆ ಹಳಗನ್ನಡದಲ್ಲಿ ವ್ಯಾಕರಣದ ಬಗ್ಗೆ ಹೇಳಿದವನು 1. 2ನೇ ನಾಗವರ್ಮ ಅಥವಾ ಇಮ್ಮಡಿ ನಾಗವರ್ಮ ಕಾಲ: 11ನೇ ಶತಮಾನ ಕೃತಿಗಳು 1. ಕರ್ನಾಟಕ ಭಾಷಾ ಭೂಷಣ 2. ಕಾವ್ಯಾವಲೋಕನ 3. ವರ್ಧಮಾನ ಪುರಾಣ 4. ಅಭಿದಾನ ವಸ್ತು ಕೋಶ 5. ಛಂದೋ ವಿಚಿತಿ 2. ಕನ್ನಡ ಶ್ರೇಷ್ಠ ವೈಯಾಕರಣಿ ಮತ್ತು ಶ್ರೇಷ್ಠ ಗ್ರಂಥ ಕೇಶಿ ರಾಜ ಕಾಲ: 13 ನೇ ಶತಮಾನ (1260) ಶ್ರೇಷ್ಠ ಕೃತಿ: ಶಬ್ಧಮಣಿದರ್ಪಣ ಇದರಲ್ಲಿ 8 ಭಾಗಗಳಿವೆ 3. ಭಟ್ಟಾಕಳಂಕಾ ಕಾಲ: 16 ಮತ್ತು 17 ನೆ ಶತಮಾನ ಕೃತಿ : ಶಬ್ಢ ಅನುಶಾಸನ. ಇದು ಸಂಸ್ಕೃತದಲ್ಲಿದೆ ಪ್ರಸ್ತುತ ಕನ್ನಡ ವರ್ಣಮಾಲೆ 49 ಸ್ವರಗಳು ಕನ್ನಡದಲ್ಲಿ ಒಟ್ಟು...
Do try this - it's pretty accurate I think.....😅😅 In the middle of the table was a round food tray with 5 kinds of fruit in it. There are: a. Apple b. Banana c. Mango d. Grapes e. Orange Which fruit will u choose? Your choice reveals about u! Pls be very Honest to yourself….. & Now scroll down for results: . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . Here are the results. A. if you chosen Apple : that means you are a person who loves to eat Apple B. if you chosen banana : that means you are a person who loves to eat Banana C. if you chosen mango : that means you are a person who loves to eat mango D. if you chosen grapes : that means you are a person who loves to eat grapes E. if you chosen orange : that means you are person who loves to eat Orange Note: If you are hunting for me to punch …..Well…I am busy hunting for th...