ಕನ್ನಡ: ಅಲಂಕಾರ ಶಾಸ್ತ್ರ Contents [hide] ೧ಅಲಂಕಾರಗಳು ೨ನವರಸಗಳು ೨.೧ಒಂಭತ್ತು ನವರಸಗಳು/ಸ್ಥಾಯಿಭಾವಗಳು ೩1.ಶಬ್ದಾಲಂಕಾರಗಳು : ೩.೧1.ಅನುಪ್ರಾಸ: ೩.೨2.ಯಮಕಾಲಂಕಾರ: ೩.೩3. ಚಿತ್ರಕವಿತ್ವ : ೪2 ಅರ್ಥಾಲಂಕಾರಗಳು: ೪.೧1. ಉಪಮಾ ಅಲಂಕಾರ : ೪.೨2. ರೂಪಕ ಅಲಂಕಾರ: ೪.೩3. ದೃಷ್ಠಾಂತ ಅಲಂಕಾರ: ೪.೪4.ಶ್ಲೇಷಾಲಂಕಾರ: ೪.೫5. ದೀಪಕ ಅಲಂಕಾರ: ೪.೬6.ಉತ್ಪ್ರೇಕ್ಷಾಲಂಕಾರ: ಅಲಂಕಾರಗಳು ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡಿಗೆಗಳನ್ನು ಧರಿಸುವಂತೆ, ಕಾವ್ಯವು ಆಕರ್ಷಕವಾಗುವಂತೆ ಅರ್ಥವೈಚಿತ್ರ್ಯದಿಂದ ಕೂಡಿದ, ಶಬ್ದವೈಚಿತ್ರ್ಯದಿಂದ ಕೂಡಿದ ಮಾತುಗಳನ್ನು ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಇಂಥ ಮಾತುಗಳೇ ಅಲಂಕಾರಗಳು. ಅರ್ಥವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಅದು ಅರ್ಥಾಲಂಕಾರ. ಶಬ್ದ ವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ. ಕನ್ನಡದಲ್ಲಿ ಅಲಂಕಾರ ಗ್ರಂಥ ಬರೆದ ಲಾಕ್ಷಣಿಕರು ಮುಖ್ಯವಾಗಿ ನೃಪತುಂಗ, ನಾಗವರ್ಮ, ತಿರುಮಲಾರ‍್ಯ, ಜಾಯಪ್ಪದೇಸಾಯಿ ಮುಂತಾದವರು. ಇವರು ಕ್ರಮವಾಗಿ ಕವಿರಾಜಮಾರ್ಗ, ಕಾವ್ಯಾವಲೋಕನ, ಅಪ್ರತಿಮವೀರಚರಿತೆ, ಕನ್ನಡಕುವಲಯಾನಂದ-ಇತ್ಯಾದಿ ಗ್ರಂಥ ಬರೆದಿದ್ದಾರೆ. ಅಲಂಕಾರದ ಬಗೆಗಿನ ವಿವರವಾದ ಮಾಹಿತಿಯನ್ನಜು ಕಣಜ ಅಂತರ್ಜಾಲ ಪುಟದಲ್ಲಿ ನೋಡಬಹುದು. ನವರಸಗಳು ಭಾರತೀಯ ಕಲಾ ಪ್ರಕಾರಗಳಲ್ಲಿ ಕಂಡು ಬರುವ ಒಂಭತ್ತು ರೀತಿಯ ಭಾವನೆಯ ಅಭಿವ್ಯಕ್ತಿಗಳನ್ನು ಒ...
Comments
Post a Comment