ಹೆಬ್ಬುಲಿ ಚಿತ್ರದ ಮೇಲೆ ಬಹಳ ನಿರೀಕ್ಷೆಯಿಟ್ಟುಕೂಂಡು ಚಿತ್ರಮಂದಿರ ಪ್ರವೇಶಿಸಿದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು .ಮೊದಲ ಭಾಗದಲ್ಲಿ ಪೂರ್ತಿಯಾಗಿ ಅದೆ ಹಳೆ ಬಿಲ್ಡಪ್ ಹಾಗು ವೇಗವಿಲ್ಲದ ಕಥೆ ಕೊಂಚ ಬೇಸರ ತರಿಸುತ್ತದೆ ದ್ವಿತಿಯರ್ಧದಲ್ಲೆ ಕಥೆ ಪ್ರಾರಂಭ ಸೈನಿಕನ ಮನೆಯಲ್ಲಿ ಆಗುವ ಸಮಸ್ಯೆಯವಯನ್ನು ನಾಯಕ ಹೇಗೆ ನಿಭಾಯಿಸುತ್ತಾನೆ ಎಂಬುದೆ ಸಿನಿಮಾದ ಕಥೆ ಯೋಧನ ಪಾತ್ರ ಮಾಡಿರುವ ಸುದೀಪ್ ಅಬ್ಬರಿಸುತ್ತಾರೆ ನಾಯಕನ ಅಣ್ಣ ಹಾಗೂ IAS ಅಧಿಕಾರಿಯ ಪಾತ್ರ ಮಾಡಿರುವ ರವಿಚಂದ್ರನ್ ತಮ್ಮ ನೈಜ ನಟನೆಯಿಂದ ಇಪ್ಟವಾಗುತ್ತಾರೆ ಖಳನಟರಾದ ರವಿಶಂಕರ್ ಹಾಗು ರವಿಕಿಶನ್ ಉತ್ತಮ ನಟನೆಯಿಂದಾಗಿ ಇಷ್ಟವಾಗುತ್ತಾರೆ ನಾಯಕಿ ಆಟಕ್ಕುಂಟು ಲೆಕ್ಕಕ್ಕಿಲ್ಲಾ. . ಹಾಡುಗಳು ಆಕರ್ಷಣೆಯಾಗಿವೆ, . ನಿರ್ದೇಶನದ ವಿಚಾರಕ್ಕೆ ಬಂದರೆ ಸಿಂಪಲ್ ಕಥೆಯನ್ನು ಇಟ್ಟುಕೂಂಡು ಮಾಡಿರುವ ಪ್ರಯತ್ನವಷ್ಟೆ. . ಕ್ಯಾಮರ ಕೈಚಳಕ ಉತ್ತಮವಾಗಿದೆ. ಅದ್ದೂರಿ ಮೇಕಿಂಗ್ ಹಾಗೂ ಮನತಣಿಸುವ ಸುಂದರ ತಾಣಗಳು ಗಮನಿಸಬೇಕಾದ ಅಂಶ. .ಅಂಕ 3./5...!